ADVERTISEMENT

ಮಹಾಶಿವರಾತ್ರಿ ದಿನ ಕಾಶಿ ವಿಶ್ವನಾಥ ದೇಗುಲಕ್ಕೆ 11 ಲಕ್ಷ ಭಕ್ತರ ಭೇಟಿ

ಪಿಟಿಐ
Published 27 ಫೆಬ್ರುವರಿ 2025, 11:18 IST
Last Updated 27 ಫೆಬ್ರುವರಿ 2025, 11:18 IST
<div class="paragraphs"><p>ಕಾಶಿ ವಿಶ್ವನಾಥ ದೇಗುಲದ ಮೇಲೆ ಹೆಲಿಕಾಪ್ಟರ್‌ ಮೂಲಕ ಪುಷ್ಪಮಳೆ ಸುರಿಸಿದ ದೃಶ್ಯ</p></div>

ಕಾಶಿ ವಿಶ್ವನಾಥ ದೇಗುಲದ ಮೇಲೆ ಹೆಲಿಕಾಪ್ಟರ್‌ ಮೂಲಕ ಪುಷ್ಪಮಳೆ ಸುರಿಸಿದ ದೃಶ್ಯ

   

ಪಿಟಿಐ ಚಿತ್ರ

ವಾರಾಣಸಿ: ಮಹಾಶಿವರಾತ್ರಿಯಂದು ವಾರಾಣಸಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, 11.69 ಲಕ್ಷ ಜನ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ ಎಂದು ಅಧಿಕೃತ ಪ್ರಕಟಣೆ ಗುರುವಾರ ತಿಳಿಸಿದೆ.

ADVERTISEMENT

ಮುಖ್ಯಮಂತ್ರಿ ಆದಿತ್ಯನಾಥ ಅವರ ನಿರ್ದೇಶನದಂತೆ ಸ್ಥಳೀಯ ಆಡಳಿತ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿತ್ತು, ಭಕ್ತರಿಗೆ ದೇವರ ದರ್ಶನ ಸುಗಮವಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಜತೆಗೆ ಕಾಶಿ ವಿಶ್ವನಾಥ ದೇಗುಲದ ಆಡಳಿತ ಮಂಡಳಿಯೂ ಕೈಜೋಡಿಸಿದ್ದರಿಂದ ಲಕ್ಷಾಂತರ ಭಕ್ತರು ಸುಗಮವಾಗಿ ದರ್ಶನ ಪಡೆದರು ಎಂದು ಪ್ರಕಟಣೆ ತಿಳಿಸಿದೆ.

ಬುಧವಾರ ಬೆಳಗಿನ ಜಾವದಿಂದಲ್ಲೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಜಲಾಭಿಷೇಕ ಕೈಗೊಳ್ಳುವ ಮೂಲಕ ಭಕ್ತರು ಶಿವನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಶಿವರಾತ್ರಿ ಪ್ರಯುಕ್ತ ವಿಶ್ವನಾಥ ದೇಗುಲ ಮತ್ತು ಗಂಗಾ ಘಾಟ್‌ಗಳ ಮೇಲೆ ಹೆಲಿಕಾಪ್ಟರ್‌ನಲ್ಲಿ ಪುಷ್ಪ ಮಳೆ ಸುರಿಸಲಾಗಿತ್ತು ಎಂದು ಪ್ರಕಟಣೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.