ADVERTISEMENT

ಕರ್ತಾರ್‌ಪುರ ಕಾರಿಡಾರ್‌ ತೆರೆದ ಪಾಕ್‌

ಪಿಟಿಐ
Published 29 ಜೂನ್ 2020, 13:23 IST
Last Updated 29 ಜೂನ್ 2020, 13:23 IST
ಕರ್ತಾರ್‌ಪುರದ ಗುರುದ್ವಾರ ದರ್ಬಾರ್‌ ಸಾಹೀಬ್‌
ಕರ್ತಾರ್‌ಪುರದ ಗುರುದ್ವಾರ ದರ್ಬಾರ್‌ ಸಾಹೀಬ್‌   

ಲಾಹೋರ್‌:ಕೋವಿಡ್‌–19ರ ಹಿನ್ನೆಲೆಯಲ್ಲಿ ಕರ್ತಾರ್‌ಪುರ ಕಾರಿಡಾರ್ ಅನ್ನು ತಾತ್ಕಾಲಿಕವಾಗಿ ಮುಚ್ಚಿದ್ದ ಪಾಕಿಸ್ತಾನ, ಮೂರು ತಿಂಗಳ ನಂತರಸೋಮವಾರ ಯಾತ್ರಿಕರ ಭೇಟಿಗೆ ತೆರವುಗೊಳಿಸಿದೆ.

‘ಭಾರತದಿಂದ ಯಾವುದೇ ಯಾತ್ರಿಕರುಕರ್ತಾರ್‌ಪುರದ ಗುರುದ್ವಾರ ದರ್ಬಾರ್‌ ಸಾಹೀಬ್‌ಗೆ ಭೇಟಿ ನೀಡಿಲ್ಲ’ ಎಂದು ಇಟಿಪಿಬಿ ನಿರ್ದೇಶಕ ಇಮ್ರಾನ್‌ ಖಾನ್‌ ಪಿಟಿಐಗೆ ತಿಳಿಸಿದ್ದಾರೆ.

‘ಪಾಕಿಸ್ತಾನ ಮತ್ತು ಭಾರತದ ಯಾತ್ರಿಕರಿಗೆ ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಮಾರ್ಗಸೂಚಿ ಅನ್ವಯ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಯಾತ್ರಿಕರ ಸುರಕ್ಷತೆಗೆ ಇಟಿಪಿಬಿ ಮತ್ತು ಪಾಕಿಸ್ತಾನ್‌ ಸಿಖ್‌ ಗುರುದ್ವಾರ ಪರ್ಬಂಧಿಕ್‌ ಸಮಿತಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಮಹಾರಾಜ ರಣ್‌ಜಿತ್‌ ಸಿಂಗ್‌ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಜೂನ್‌ 29ರಿಂದ ಕಾರಿಡಾರ್‌ ಅನ್ನು ಎಲ್ಲ ಸಿಖ್‌ ಯಾತ್ರಿಕರಿಗೆ ತೆರೆಯುವ ಬಗ್ಗೆ ಈ ಹಿಂದೆ ಪಾಕ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೊಹಮ್ಮದ್‌ ಖುರೇಷಿ ತಿಳಿಸಿದ್ದರು.

ಮಾರ್ಚ್‌ 16ರಂದು ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಕಾರಿಡಾರ್‌ ಅನ್ನು ಮುಚ್ಚಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.