ADVERTISEMENT

ಒಡಿಶಾದಲ್ಲಿ ಖಾಸಗಿ ವಿಮಾನ ಅಪಘಾತ: ಆರು ಮಂದಿಗೆ ಗಾಯ

ಪಿಟಿಐ
Published 10 ಜನವರಿ 2026, 15:41 IST
Last Updated 10 ಜನವರಿ 2026, 15:41 IST
   

ರೂರ್‌ಕೇಲಾ/ಭು‌ವನೇಶ್ವರ: ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನವೊಂದು ರೂರ್‌ಕೇಲಾ ಬಳಿ ಅಪಘಾತಕ್ಕೀಡಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಒಡಿಶಾದ ವಾಣಿಜ್ಯ ಮತ್ತು ಸಾರಿಗೆ ಸಚಿವ ಬಿ.ಬಿ. ಜೆನಾ ಅವರು ತಿಳಿಸಿದ್ದಾರೆ.

ಭುವನೇಶ್ವರದಿಂದ ರೂರ್‌ಕೇಲಾಗೆ ಪ್ರಯಾಣಿಕರನ್ನು ಕರೆದ್ದೊಯ್ಯುತ್ತಿದ್ದ ಒಂಬತ್ತು ಆಸನಗಳ ಇಂಡಿಯಾ ಒನ್‌ ವಿಮಾನಯಾನ ಸಂಸ್ಥೆಗೆ ಸೇರಿದ ಒನ್‌ ಎ–1  ವಿಮಾನವು ದಾರಿ ಮಧ್ಯೆ ಅಪಘಾತ ಅಪಘಾತಕ್ಕೀಡಾಗಿದೆ. ಈ ವೇಳೆ ವಿಮಾನದಲ್ಲಿ ನಾಲ್ವರು ಪ್ರಯಾಣಿಕರು ಸೇರಿದಂತೆ ಇಬ್ಬರು ಸಿಬ್ಬಂದಿ ಇದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣಾ ತಂಡವು ಗಾಯಗೊಂಡವರನ್ನು ರಕ್ಷಿಸಿ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದೆ. ಈ ವಿಮಾನವು ಭುವನೇಶ್ವರ ಮತ್ತು ರೂರ್‌ಕೇಲಾ ಮಧ್ಯೆ ನಿಯಮಿತವಾಗಿ ಹಾರಾಟ ನಡೆಸುತ್ತಿದ್ದು, ಖಾಸಗಿ ನಿರ್ವಾಹಕರು ಇದರ ಕಾರ್ಯಾಚರಣೆ ನಡೆಸುತ್ತಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.