ADVERTISEMENT

ಪಿಎಂ-ಕಿಸಾನ್‌ ನಿಧಿ: ಹೊಸ ವರ್ಷಕ್ಕೆ ₹20 ಸಾವಿರ ಕೋಟಿ ಬಿಡುಗಡೆ

ಪಿಟಿಐ
Published 29 ಡಿಸೆಂಬರ್ 2021, 13:22 IST
Last Updated 29 ಡಿಸೆಂಬರ್ 2021, 13:22 IST
ಸಾಂದರ್ಭಿಕ ಚಿತ್ರ (ಮಂಡ್ಯ ತಾಲ್ಲೂಕಿನ ಚೀರನಹಳ್ಳಿಯಲ್ಲಿ ಒಕ್ಕಣೆ ಮಾಡಿದ ಭತ್ತ ತೂರುತ್ತಿರುವ ರೈತ)
ಸಾಂದರ್ಭಿಕ ಚಿತ್ರ (ಮಂಡ್ಯ ತಾಲ್ಲೂಕಿನ ಚೀರನಹಳ್ಳಿಯಲ್ಲಿ ಒಕ್ಕಣೆ ಮಾಡಿದ ಭತ್ತ ತೂರುತ್ತಿರುವ ರೈತ)   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್‌ ನಿಧಿಯಿಂದ ಫಲಾನುಭವಿ ರೈತರಿಗೆ ₹20 ಸಾವಿರ ಕೋಟಿಯನ್ನು ಹೊಸ ವರ್ಷದ ಮೊದಲ ದಿನ ಬಿಡುಗಡೆ ಮಾಡಲಿದ್ದಾರೆ.

ಜನವರಿ 1ರಂದು, 10 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಹಣ ವರ್ಗಾವಣೆಯಾಗಲಿದೆ. ರೈತರ ಖಾತೆಗೆ ಸೇರ್ಪಡೆಗೊಳ್ಳುತ್ತಿರುವ 10ನೇ ಕಂತು ಇದಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಪ್ರಧಾನ ಮಂತ್ರಿಕಿಸಾನ್‌ ಸಮ್ಮಾನ್‌ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ ₹6,000 ಮೂರು ಕಂತುಗಳ ರೂಪದಲ್ಲಿ ಸಿಗಲಿದೆ. ನಾಲ್ಕು ತಿಂಗಳಿಗೊಮ್ಮೆ ₹2,000 ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತದೆ.

ADVERTISEMENT

ಪ್ರಧಾನಿ ಮೋದಿ ಸಾಮಾನ್ಯ ರೈತರ ಏಳ್ಗೆಗೆ ಹಣ ಬಿಡುಗಡೆ ಮಾಡುವ ಮೂಲಕ ತಮ್ಮ ಬದ್ಧತೆಯನ್ನು ಕಾಯ್ದುಕೊಂಡಿದ್ದಾರೆ ಎಂದು ಪಿಎಂಒ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.