
ಮೊರನ್: ಚೀನಾ ಗಡಿಯಲ್ಲಿರುವ ಅಸ್ಸಾಂನ ಮೊರನ್ ಬೈಪಾಸ್‌ನಲ್ಲಿ ವಿಮಾನ, ಹೆಲಿಕಾಪ್ಟರ್‌ಗಳು ಲ್ಯಾಡಿಂಗ್ ಆಗುತ್ತಿದ್ದರೆ, ಅದನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ನಾಗರಿಕರು ಕುತೂಹಲದಿಂದ ವೀಕ್ಷಿಸಿದ ಘಟನೆ ಶುಕ್ರವಾರ ಜರುಗಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಸ್ಸಾಂ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರು ಮೊರನ್ ಬೈಪಾಸ್‌ನಲ್ಲಿ ₹100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 4.2 ಕಿ.ಮೀ ಉದ್ದದ ತುರ್ತು ಲ್ಯಾಂಡಿಂಗ್ ಸೌಲಭ್ಯ(ಇಎಲ್‌ಎಫ್)ವನ್ನು ಉದ್ಘಾಟಿಸಿದರು. ನಂತರ ಭಾರತೀಯ ವಾಯುಪಡೆಯು 20 ನಿಮಿಷಗಳ ಕಾಲ ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್‌ಗಳೊಂದಿಗೆ ವೈಮಾನಿಕ ಪ್ರದರ್ಶನ ನಡೆಸಿತು.
ಯುದ್ಧ ವಿಮಾನಗಳಾದ ಸುಖೋಯ್-30 ಎಂಕೆಐ, ರಫೇಲ್ ಹಾಗೂ ಎನ್–32 ಹೆಲಿಕಾಪ್ಟರ್ ಸೇರಿದಂತೆ 16ಕ್ಕೂ ಅಧಿಕ ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಇಎಲ್‌ಎಫ್ ಉದ್ಘಾಟನಾ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಹಾಗೂ ವಾಯುಪಡೆಯ ಮುಖ್ಯಸ್ಥ ಎ.ಪಿ. ಸಿಂಗ್ ಕೂಡ ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಅವರು ವಾಯುಪಡೆಯ ಸಿ–130ಜೆ ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ ಇಎಲ್‌ಎಫ್ ಮೂಲಕವೇ ಟೇಕ್‌ಆಫ್ ಆಗಿದ್ದು ವಿಶಿಷ್ಟವಾಗಿತ್ತು.
ಮೊರನ್ ಬೈಪಾಸ್‌ನ ತುರ್ತು ಲ್ಯಾಂಡಿಂಗ್ ಸೌಲಭ್ಯವು ಭಾರತದ ಈಶಾನ್ಯ ಪ್ರದೇಶದಲ್ಲಿ ಮೊದಲ ಪ್ರಯತ್ನವಾಗಿದ್ದು, ಚೀನಾ ಗಡಿಯಲ್ಲಿ ತನ್ನ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಹಾಗೂ ಗಡಿ ಭದ್ರತೆಯ ಜತೆಗೆ ಹವಾಮಾನ ವೈಪರಿತ್ಯ, ರಕ್ಷಣೆ ಹಾಗೂ ವೈದ್ಯಕೀಯ ಸ್ಥಳಾಂತರಿಸುವಿಕೆ ಮುಂತಾದ ತುರ್ತು ಸಂದರ್ಭಗಳಲ್ಲಿ ಕೂಡ ಇಎಲ್‌ಎಫ್ ನೆರವಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.