ADVERTISEMENT

ಕ್ಯಾನ್ಸರ್‌ನಿಂದ ಕಿಂಗ್ ಚಾರ್ಲ್ಸ್ ಶೀಘ್ರ ಗುಣಮುಖರಾಗಲಿ: ಪ್ರಧಾನಿ ಮೋದಿ

ಪಿಟಿಐ
Published 6 ಫೆಬ್ರುವರಿ 2024, 6:11 IST
Last Updated 6 ಫೆಬ್ರುವರಿ 2024, 6:11 IST
<div class="paragraphs"><p>ಪ್ರಧಾನಿ ಮೋದಿ</p></div>

ಪ್ರಧಾನಿ ಮೋದಿ

   

(ಚಿತ್ರ ಕೃಪೆ–ಪಿಟಿಐ)

ನವದೆಹಲಿ: ಕ್ಯಾನ್ಸರ್‌ನಿಂದ ಬಳಲುತ್ತಿರುವ ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹಾರೈಸಿದ್ದಾರೆ.

ADVERTISEMENT

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ, 'ಕಿಂಗ್ ಚಾರ್ಲ್ಸ್ ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅವರ ಉತ್ತಮ ಆರೋಗ್ಯಕ್ಕಾಗಿ ಭಾರತದ ಜನರ ಪರವಾಗಿ ನಾನು ಹಾರೈಸುತ್ತೇನೆ' ಎಂದಿದ್ದಾರೆ.

ಕಿಂಗ್ ಚಾರ್ಲ್ಸ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್‌ ಹ್ಯಾಮ್ ಅರಮನೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.