ADVERTISEMENT

ಬಂಗಾಳ: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಕ್ರಿಕೆಟ್ ಉದಾಹರಣೆ ನೀಡಿದ್ದೇಕೆ?

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 13:42 IST
Last Updated 3 ಏಪ್ರಿಲ್ 2021, 13:42 IST
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)   

ಕೋಲ್ಕತ್ತ: ಚುನಾವಣಾ ಆಯೋಗವನ್ನು ಪದೇಪದೇ ಪ್ರಶ್ನಿಸುತ್ತಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

ಕ್ರಿಕೆಟ್‌ನಲ್ಲಿ ಅಂಪೈರ್ ನಿರ್ಧಾರವನ್ನು ಪದೇಪದೇ ಪ್ರಶ್ನಿಸುವ ಆಟಗಾರನ ಉದಾಹರಣೆ ನೀಡಿದ ಅವರು, ಒಬ್ಬ ಆಟಗಾರ ಮತ್ತೆ ಮತ್ತೆ ಅಂಪೈರ್ ತೀರ್ಪನ್ನು ಪ್ರಶ್ನಿಸುತ್ತಾನೆ ಎಂದರೆ ಆತನ ಆಟದಲ್ಲಿ ಏನೋ ಲೋಪವಿದೆ ಎಂಬುದು ನಮಗೆ ಗೊತ್ತಾಗುತ್ತದೆ. ರಾಜಕೀಯದಲ್ಲಿ ಯಾರಾದರೂ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ಚುನಾವಣಾ ಆಯೋಗವನ್ನು ನಿರಂತರವಾಗಿ ಪ್ರಶ್ನಿಸುತ್ತಾರೆ ಎಂದರೆ ಅವರ ಆಟ ಮುಕ್ತಾಯವಾಗಿದೆ ಎಂದು ನಾವು ಅರ್ಥೈಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ತಾರಕೇಶ್ವರ್‌ನಲ್ಲಿ ಚುನಾವಣಾ ಪ್ರಚಾರ ರ್‍ಯಾಲಿ ಉದ್ಧೇಶಿಸಿ ಮಾತನಾಡಿದ ಮೋದಿ, ಸೋಲು ನಿಮ್ಮ ಮುಂದಿದೆ, ಅದನ್ನು ಒಪ್ಪಿಕೊಳ್ಳಿ ಎಂದು ಮಮತಾ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.

ಬಂಗಾಳ ಮತ್ತು ಇಲ್ಲಿನ ಜನರು, ಸಂಸ್ಕೃತಿಯಲ್ಲಿ ಮಾಧುರ್ಯವಿದೆ. ಆದರೆ ಮಮತಾ ಯಾಕೆ ಹುಳಿಹಿಂಡುತ್ತಿದ್ದಾರೆ ಎಂದು ಮೋದಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.