ADVERTISEMENT

ನಾಸಿಕ್‌: ಮಹಾರಾಷ್ಟ್ರ ಸಿ.ಎಂ ಶಿಂದೆ ಬ್ಯಾಗ್‌ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಮೇ 2024, 14:30 IST
Last Updated 16 ಮೇ 2024, 14:30 IST
ಏಕನಾಥ ಶಿಂದೆ
ಏಕನಾಥ ಶಿಂದೆ   

ನಾಸಿಕ್‌: ಚುನಾವಣಾ ಪ್ರಚಾರಕ್ಕಾಗಿ ಇಲ್ಲಿನ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಬ್ಯಾಗ್‌ ಅನ್ನು ಅಧಿಕಾರಿಗಳು ಗುರುವಾರ ಪರಿಶೀಲಿಸಿದರು.

ಶಿಂದೆ ಅವರ ಬ್ಯಾಗ್‌ನಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತುಗಳು ಕಂಡುಬಂದಿ‌ಲ್ಲ ಎಂದು ಬಳಿಕ ಚುನಾವಣಾ ಅಧಿಕಾರಿಗಳು ತಿಳಿಸಿದರು.

ಏಕನಾಥ ಶಿಂದೆ ಅವರು ಪ್ರಯಾಣಿಸು‌ವ ಹೆಲಿಕಾಪ್ಟರ್‌ನಲ್ಲಿ ಹಣದ ಬ್ಯಾಗ್‌ಗಳನ್ನು ಕೊಂಡೊಯ್ಯಲಾಗುತ್ತಿದೆ ಎಂದು ಶಿವಸೇನಾ ಉದ್ಧವ್‌ ಠಾಕ್ರೆ ಬಣದ ಮುಖಂಡ ಸಂಜಯ್‌ ರಾವುತ್‌ ಅವರು ಆರೋಪಿಸಿದ ಮರು‌ದಿನ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಶಿಂದೆ ಅವರು ಪ್ರಯಾಣಿಸಿದ್ದ ಹೆಲಿಕಾಪ್ಟರ್‌ನಿಂದ ಕೆಲವು ವ್ಯಕ್ತಿಗಳು ದೊಡ್ಡ ಬ್ಯಾಗ್‌ಗಳನ್ನು ಸಾಗಿಸುತ್ತಿರುವ ದೃಶ್ಯವಿರುವ ವಿಡಿಯೊವನ್ನೂ ರಾವುತ್‌ ಅವರು ‘ಎಕ್ಸ್‌’ ವೇದಿಕೆಯಲ್ಲಿ ಹಂಚಿಕೊಂಡಿದ್ದರು.

‘ನನ್ನ ಬಳಿ ಇದ್ದ ಬ್ಯಾಗ್‌ನಲ್ಲಿ ಬಟ್ಟೆಗಳಿದ್ದವು’ ಎಂದು ಏಕನಾಥ ಶಿಂದೆ ತಿಳಿಸಿದರು. ಪಕ್ಷದ ಅಭ್ಯರ್ಥಿ ಹೇಮಂತ್‌ ಗೋಡ್ಸೆ ಪರ ಪ್ರಚಾರಕ್ಕಾಗಿ ಶಿಂದೆ ಅವರು ಹೆಲಿಕಾಪ್ಟರ್‌ನಲ್ಲಿ ನಾಸಿಕ್‌ಗೆ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.