ADVERTISEMENT

ಜಾಗತಿಕ ಹಬ್ಬವಾಗಿ ಪೊಂಗಲ್‌ ಆಚರಣೆ: ಪ್ರಧಾನಿ ಮೋದಿ ಸಂತಸ

ಪಿಟಿಐ
Published 14 ಜನವರಿ 2026, 7:23 IST
Last Updated 14 ಜನವರಿ 2026, 7:23 IST
<div class="paragraphs"><p>ಪೊಂಗಲ್‌ ಆಚರಣೆಯಲ್ಲಿ ಮೋದಿ ಭಾಗಿ&nbsp;</p></div>

ಪೊಂಗಲ್‌ ಆಚರಣೆಯಲ್ಲಿ ಮೋದಿ ಭಾಗಿ 

   

ನವದೆಹಲಿ: ಸಂಕ್ರಾಂತಿ (ಪೊಂಗಲ್) ಹಬ್ಬ ಇದೀಗ ಜಾಗತಿಕ ಹಬ್ಬವಾಗಿ ಹೊರಹೊಮ್ಮಿದೆ. ಪ್ರಕೃತಿಯೊಂದಿಗೆ ಸಮತೋಲನ ಕಾಪಾಡಿಕೊಳ್ಳುವ ಸಂದೇಶವನ್ನು ಈ ಹಬ್ಬ ಜಗತ್ತಿಗೆ ಸಾರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಸಚಿವ ಎಲ್‌. ಮುರಗನ್‌ ಮನೆಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಪೊಂಗಲ್‌ ಆಚರಣೆಯಲ್ಲಿ ಭಾಗಿಯಾಗಿದರು.

ADVERTISEMENT

ಈ ಹಬ್ಬವು ರೈತರ ಕಠಿಣ ಪರಿಶ್ರಮಕ್ಕೆ ಪ್ರತಿಬಿಂಬ. ಸಂಕ್ರಾಂತಿ ಹಬ್ಬದ ಆಚರಣೆಯ ಮೂಲಕ ಭೂಮಿ ಮತ್ತು ಸೂರ್ಯನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ.

ತಮಿಳು ಸಂಸ್ಕೃತಿಯು ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ. ಶತಮಾನಗಳ ಜ್ಞಾನ ಮತ್ತು ಸಂಪ್ರದಾಯ ಒಳಗೊಂಡಿದೆ. ಈ ಪರಂಪರೆಯಿಂದ ಪ್ರೇರಿತರಾಗಿ ಇಂದಿನ ಭಾರತವು ಮುಂದುವರಿಯುತ್ತಿದೆ. ಸಾಂಸ್ಕೃತಿಕ ಬೇರುಗಳಿಂದ ದೇಶವು ಮತ್ತಷ್ಟು ಬಲಪಡುತ್ತದೆ ಎಂದು ಮೋದಿ ತಿಳಿಸಿದ್ದಾರೆ.

ಈ ಹಬ್ಬವು ಕೃಷಿ, ರೈತರು, ಗ್ರಾಮೀಣ ಬದುಕಿನೊಂದಿಗೆ ಸಂಬಂಧ ಹೊಂದಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಪೊಂಗಲ್ ಕೇವಲ ಹಬ್ಬವಲ್ಲ. ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು. ಭೂಮಿಯು ನಮಗೆ ಇಷ್ಟೊಂದು ನೀಡುತ್ತಿರುವಾಗ ಅದನ್ನು ಪಾಲಿಸುವುದು ಮತ್ತು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.