ಪೋಪ್ ಫ್ರಾನ್ಸಿಸ್
(ರಾಯಿಟರ್ಸ್ ಚಿತ್ರ)
ನವದೆಹಲಿ: ಪೋಪ್ ಫ್ರಾನ್ಸಿಸ್ ನಿಧನಕ್ಕೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಭಾರತ ಪ್ರವಾಸದಲ್ಲಿರುವ ಜೆ.ಡಿ. ವ್ಯಾನ್ಸ್, ಪೋಪ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
'ಪೋಪ್ ಅವರನ್ನು ಪ್ರೀತಿಸಿದ ಜಗತ್ತಿನದ್ಯಾಂತದ ಕ್ರೈಸ್ತರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ' ಎಂದು ವ್ಯಾನ್ಸ್ ತಿಳಿಸಿದ್ದಾರೆ.
'ನಿನ್ನೆ (ಭಾನುವಾರ) ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗುವ ಅದೃಷ್ಟ ದೊರಕಿತು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು' ಎಂದು ವ್ಯಾನ್ಸ್ ಬರೆದುಕೊಂಡಿದ್ದಾರೆ.
ವ್ಯಾಟಿಕನ್‌ನಲ್ಲಿ ಪೋಪ್ ಭೇಟಿಯಾಗಿದ್ದ ಜೆ.ಡಿ. ವ್ಯಾನ್ಸ್ ಬಳಿಕ ಭಾರತ ಪ್ರವಾಸ ಬೆಳೆಸಿದ್ದರು.
ಭಾನುವಾರ ಈಸ್ಟರ್ ಹಬ್ಬದಂದು ಪೋಪ್ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಬಳಿಕ ಕ್ರೈಸ್ತರಿಗೆ ಈಸ್ಟರ್ ಸಂದೇಶವನ್ನು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.