ADVERTISEMENT

ಮಾಲಿನ್ಯ ವಿಚಾರ ರಾಜಕೀಯಗೊಳಿಸುವ ಅರವಿಂದ ಕೇಜ್ರಿವಾಲ್: ಪ್ರಕಾಶ್ ಜಾವಡೇಕರ್ ಆರೋಪ

ಪಿಟಿಐ
Published 1 ನವೆಂಬರ್ 2019, 11:02 IST
Last Updated 1 ನವೆಂಬರ್ 2019, 11:02 IST
ಪ್ರಕಾಶ್‌ ಜಾವಡೇಕರ್‌
ಪ್ರಕಾಶ್‌ ಜಾವಡೇಕರ್‌   

ನವದೆಹಲಿ:ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರುವ ವಿಚಾರವನ್ನು ರಾಜಕೀಯಗೊಳಿಸುತ್ತಿರುವ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ಅವರ ಧೋರಣೆ ಸರಿಯಲ್ಲ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಶುಕ್ರವಾರ ಹೇಳಿದರು.

ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ‘ಇ–ವಾಹನ’ ಸಂಚಾರ ಪ್ರೋತ್ಸಾಹಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮಗೆ ಮತ್ತು ತಮ್ಮ ಸಚಿವಾಲಯಕ್ಕಾಗಿ ‘ಇ–ವಾಹನ’ ಪಡೆದ ಜಾವಡೇಕರ್‌ ಅವರು, ವಾಯು ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ. ಅಲ್ಲದೆ ಇದು ನಮ್ಮ ಕರ್ತವ್ಯವೂ ಆಗಿದೆ ಎಂದು ಹೇಳಿದರು.

ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಪೂರ್ವ ಪೆರಿಫೆರಲ್‌ ಎಕ್ಸ್‌ಪ್ರೆಸ್‌ ಕಾಮಗಾರಿಗೆ ಅಗತ್ಯ ಅನುದಾನವನ್ನು ದೆಹಲಿ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ದೆಹಲಿ ಸೇರಿದಂತೆ ದೇಶದ ಐದು ರಾಜ್ಯಗಳಲ್ಲಿ 1500 ವಿದ್ಯುತ್‌ ಚಾಲಿತ ಕಾರುಗಳಿದ್ದು, ರಾಷ್ಟ್ರೀಯ ರಾಜಧಾನಿಯಲ್ಲಿ 65 ಚಾರ್ಜಿಂಗ್‌ ಕೇಂದ್ರಗಳಿವೆ ಎಂದು ಇಇಎಸ್‌ಎಲ್‌ ವ್ಯವಸ್ಥಾಪಕ ನಿರ್ದೇಶಕ ಸೌರಭ್‌ ಕುಮಾರ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.