ADVERTISEMENT

ಕೋವಿಡ್‌ ಲಸಿಕೆ: 2ನೇ ಡೋಸ್‌ಗೆ ಆದ್ಯತೆ ನೀಡುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಪಿಟಿಐ
Published 11 ಮೇ 2021, 20:30 IST
Last Updated 11 ಮೇ 2021, 20:30 IST
ಕೋವಿಡ್‌ ಲಸಿಕೆ
ಕೋವಿಡ್‌ ಲಸಿಕೆ   

ನವದೆಹಲಿ: ‘ಕೋವಿಡ್‌ ಲಸಿಕೆ ಕಾರ್ಯಕ್ರಮದಲ್ಲಿ ಎರಡನೇ ಡೋಸ್‌ ಹಾಕಿಸಿಕೊಳ್ಳಬೇಕಿರುವವರಿಗೆ ಆದ್ಯತೆ ನೀಡಿ’ ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ.

‘ಇನ್ನು ಮುಂದೆ ಕೇಂದ್ರವು ಪೂರೈಸಲಿರುವ ಲಸಿಕೆಯಲ್ಲಿ ಶೇ 70ರಷ್ಟನ್ನು ಎರಡನೇ ಡೋಸ್‌ ಹಾಕಿಸಿಕೊಳ್ಳುವವರಿಗೆ ಮೀಸಲಿರಿಸಿ. ಶೇ 30ರಷ್ಟನ್ನುಮೊದಲ ಡೋಸ್‌ ಹಾಕಿಸಿಕೊಳ್ಳುವವರಿಗೆ ನೀಡಿ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

‘ಶೇ 100ರಷ್ಟು ಲಸಿಕೆಗಳನ್ನೂ ಎರಡನೇ ಡೋಸ್ ಪಡೆಯುವವರಿಗೆ ನೀಡಬಹುದು. ಇದನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗಿದೆ’ ಎಂದು ಸಚಿವಾಲಯವು ಹೇಳಿದೆ.

ADVERTISEMENT

ಸಮನ್ವಯಕ್ಕೆ ತಂಡ: ಲಸಿಕೆ ತಯಾರಕರಿಂದ ರಾಜ್ಯ ಸರ್ಕಾರಗಳು ಖರೀದಿಸಿರುವ ಲಸಿಕೆಗಳ ಮೊತ್ತ ಪೂರ್ಣಪ್ರಮಾಣದಲ್ಲಿ ಪಾವತಿಯಾಗಿಲ್ಲ. ಲಸಿಕೆ ತಯಾರಕರ ಜತೆ ಸಮನ್ವಯಕ್ಕಾಗಿ ತಂಡವನ್ನು ರಚಿಸಿ. ಲಸಿಕೆ ಪೂರೈಕೆಯಲ್ಲಿ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.