ADVERTISEMENT

ಆನ್‌ಲೈನ್‌ ಮೂಲಕ ಶಾಲಾ ಮಕ್ಕಳಿಗೆ ಡ್ರಗ್ಸ್‌ ಜಾಗೃತಿ

ಪಿಟಿಐ
Published 17 ಸೆಪ್ಟೆಂಬರ್ 2020, 11:55 IST
Last Updated 17 ಸೆಪ್ಟೆಂಬರ್ 2020, 11:55 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಡ್ರಗ್ಸ್‌ ವಿರುದ್ಧ ಶಾಲಾ ಮಕ್ಕಳಿಗೆಆನ್‌ಲೈನ್‌ ಮೂಲಕ ಅರಿವು ಮೂಡಿಸಲು ದೆಹಲಿ ಸರ್ಕಾರ ಮುಂದಾಗಿದೆ.

ಈ ಸಂಬಂಧ ಮೊದಲ ಹಂತವಾಗಿ ಏಮ್ಸ್‌ನ‌ಲ್ಲಿರುವ ‘ರಾಷ್ಟ್ರೀಯ ಮಾದಕ ವಸ್ತು ಅವಲಂಬಿತರ ಚಿಕಿತ್ಸಾ ಕೇಂದ್ರ’ದ (ಎನ್‌ಡಿಡಿಟಿಸಿ) ಸಹಯೋಗದೊಂದಿಗೆ ಸಮೀಕ್ಷೆ ನಡೆಸಲಾಗಿದೆ. ಎರಡನೇ ಹಂತದಲ್ಲಿ ಸೂಕ್ತ ಸಂಪನ್ಮೂಲಗಳನ್ನು ಬಳಸಿಕೊಂಡು ಪೋಷಕರು ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತದೆ.

‘ಕೊರೊನಾ ಸೋಂಕು ಬಿಕ್ಕಟ್ಟಿನಿಂದಾಗಿ ಶಾಲೆಗಳು ಬಂದ್‌ ಆಗಿರುವುದರಿಂದ ಡ್ರಗ್ಸ್‌ ಸಂಬಂಧಿತ ಜಾಗೃತಿ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ. ಶಾಲೆಗಳು ಪುನರಾರಂಭ ಆಗುವವರೆಗೆ ಡಿಜಿಟಲ್‌ ಮಾಧ್ಯಮಗಳ ಮೂಲಕ ಅರಿವು ಕಾರ್ಯಕ್ರಮ ನಡೆಸಲಾಗುವುದು. ಪ್ರಾಯೋಗಿಕ ಯೋಜನೆಯ ಮೂಲಕ ಈ ಅರಿವು ಕಾರ್ಯಕ್ರಮದ ಕಾರ್ಯಕ್ಷಮತೆಯನ್ನು ನಿರ್ಣಯಿಸಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.