ADVERTISEMENT

ಪುಲ್ವಾಮ ದಾಳಿ: ಭಾರತೀಯ ಸಿನಿಮಾದಿಂದ ಪಾಕ್ ಕಲಾವಿದರಿಗೆ ನಿಷೇಧ

ಭಾರತ ಚಲನಚಿತ್ರ ಕಾರ್ಮಿಕರ ಒಕ್ಕೂಟದ ದಿಟ್ಟ ನಿರ್ಧಾರ

ಏಜೆನ್ಸೀಸ್
Published 18 ಫೆಬ್ರುವರಿ 2019, 12:32 IST
Last Updated 18 ಫೆಬ್ರುವರಿ 2019, 12:32 IST
ಪಾಕಿಸ್ತಾನ ಕಲಾವಿದರು
ಪಾಕಿಸ್ತಾನ ಕಲಾವಿದರು   

ನವದೆಹಲಿ: ಬಾಲಿವುಡ್‌ನಿಂದ ಪಾಕ್‌ ಕಲಾವಿದರಿಗೆ ನಿಷೇಧ ಹೇರುವ ಮೂಲಕಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಒಕ್ಕೂಟ (ಎಐಸಿಡಬ್ಲೂಎ) ಉಗ್ರರ ದಾಳಿಯಲ್ಲಿಹುತಾತ್ಮರಾದ ಸಿಆರ್‌ಪಿಎಫ್‌ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.

ಭಾರತೀಯ ಸಿನಿಮಾದಲ್ಲಿ ತೊಡಗಿಕೊಂಡಿರುವ ಪಾಕಿಸ್ತಾನದ ನಟ–ನಟಿಯರು ಸೇರಿ ಎಲ್ಲಾಕಲಾವಿದರನ್ನು ಬಾಲಿವುಡ್‌ನಿಂದ ನಿಷೇಧಿಸಲಾಗಿದ್ದು, ಯಾವುದಾದರೂ ನಿರ್ಮಾಣ ಸಂಸ್ಥೆ ಇದನ್ನು ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

‘ಭಾರತೀಯ ಚಲನಚಿತ್ರ ಉದ್ದಿಮೆಯಿಂದ ಪಾಕ್‌ ಕಲಾವಿದರಿಗೆ ನಿಷೇಧ’ ಎನ್ನುವ ಶಿರೋನಾಮೆ ಹೊಂದಿರುವ ನೋಟಿಸ್‌ಗೆ ಒಕ್ಕೂಟ ಪ್ರಧಾನ ಕಾರ್ಯದರ್ಶಿ ರೋನಕ್‌ ಸುರೇಶ್‌ ಜೈನ್‌ ಸಹಿ ಮಾಡಿದ್ದು, ಅದನ್ನು ಎಎನ್‌ಐ ಸುದ್ದಿ ಸಂಸ್ಥೆ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ.

ADVERTISEMENT

ಉಗ್ರರ ಆತ್ಮಾಹುತಿ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಒಕ್ಕೂಟ, ದಾಳಿಯಲ್ಲಿ ಮಡಿದ ಸಿಆರ್‌ಪಿಎಫ್‌ ಸಿಬ್ಬಂದಿ ಕುಟುಂಬದವರಿಗೆ ಸಂತಾಪ ಸೂಚಿಸಿದರು.‘ದೇಶ ಮೊದಲು, ದೇಶದೊಂದಿಗೆ ನಾವು ನಿಲ್ಲುತ್ತೇವೆ’ ಎನ್ನುವ ಧ್ಯೇಯವಾಕ್ಯದ ಮೂಲಕ ಈ ನಿಷೇಧದ ನಿರ್ಧಾರವನ್ನು ಒಕ್ಕೂಟ ಪ್ರಕಟಿಸಿದೆ. ನಿಷೇಧಿತ ಕಲಾವಿದರನ್ನು ಬಳಸಿಕೊಂಡಿದ್ದು ತಿಳಿದು ಬಂದರೆ ಅವರನ್ನು ಒಕ್ಕೂಟದಿಂದ ಹೊರಹಾಕುವುದಾಗಿಯೂ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.