ADVERTISEMENT

ನೌಕಾದಳಕ್ಕೆ 26 ರಫೆಲ್ ಯುದ್ಧ ವಿಮಾನ; ₹64,000 ಕೋಟಿ ಒಪ್ಪಂದಕ್ಕೆ PM ಮೋದಿ ಅಸ್ತು

ಪಿಟಿಐ
Published 9 ಏಪ್ರಿಲ್ 2025, 15:47 IST
Last Updated 9 ಏಪ್ರಿಲ್ 2025, 15:47 IST
<div class="paragraphs"><p>ರಫೆಲ್</p></div>

ರಫೆಲ್

   

ನವದೆಹಲಿ: ಯುದ್ಧ ವಿಮಾನಗಳನ್ನು ಹೊತ್ತು ಸಾಗುವ ಐಎನ್‌ಎಸ್ ವಿಕ್ರಾಂತ್‌ಗಾಗಿ 26 ರಫೆಲ್‌–ಎಂ ಜೆಟ್ ಖರೀದಿಸಲು ₹64 ಸಾವಿರ ಕೋಟಿ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಯ ಸಂಪುಟ ಸಮಿತಿ (CCS) ಬುಧವಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.

ಈ ವಿಮಾನಗಳು ಮುಂದಿನ ಐದು ವರ್ಷಗಳಲ್ಲಿ ಭಾರತೀಯ ನೌಕಾಪಡೆಯನ್ನು ಸೇರಲಿವೆ. ಈ ಕುರಿತು ಭಾರತ ಮತ್ತು ಫ್ರಾನ್ಸ್ ನಡುವೆ ಒಪ್ಪಂದ ನೆರವೇರಲಿದೆ. ಈ ಒಪ್ಪಂದದಡಿ ಭಾರತೀಯ ನೌಕಾದಳವು ಪೂರಕ ಉಪಕರಣಗಳಾದ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ರಫೆಲ್‌ ಜೆಟ್ ತಯಾರಿಕಾ ಕಂಪನಿಯಾದ ಡಸಾಲ್ಟ್‌ ಏವಿಯೇಷನ್‌ನಿಂದ ಖರೀದಿಸಲಿದೆ.

ADVERTISEMENT

ಈವರೆಗೂ ಭಾರತೀಯ ವಾಯುಸೇನೆಯು 36 ರಫೆಲ್‌ ಯುದ್ಧ ವಿಮಾನಗಳನ್ನು ಖರೀದಿಸಿದೆ. ಭವಿಷ್ಯದಲ್ಲಿ ಕನಿಷ್ಠ ಎರಡು ಸ್ಕ್ವಾಡ್ರನ್‌ನಷ್ಟು (1 ಸ್ಕ್ವಾಡ್ರನ್‌=18 ಯುದ್ಧ ವಿಮಾನಗಳು) ರಫೆಲ್‌ ಜೆಟ್‌ಗಳನ್ನು ಖರೀದಿಸಲಿದೆ ಎಂದೆನ್ನಲಾಗಿದೆ. ಕಳೆದ ಐದು ವರ್ಷಗಳಲ್ಲಿ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರತ ಮತ್ತು ಫ್ರಾನ್ಸ್‌ ನಡುವಿನ ಸಂಬಂಧ ಉತ್ತಮವಾಗಿದೆ.

2023ರ ಜುಲೈನಲ್ಲಿ ನಡೆದ ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದದಂತೆ ಜೆಟ್‌ ಮತ್ತು ಹೆಲಿಕಾಪ್ಟರ್‌ ಎಂಜಿನ್‌ಗಳನ್ನು ಜಂಟಿ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಒಪ್ಪಂದ ನೆರವೇರಿತ್ತು. 

ಫ್ರಾನ್ಸ್‌ನ ನೌಕಾದಳದ ಸಹಕಾರದಲ್ಲಿ ಭಾರತದ ಮಝಗಾಂವ್ ಡಾಕ್ ಲಿಮಿಟೆಡ್‌ ವತಿಯಿಂದ ಆರು ಸ್ಕಾರ್ಪಿನ್‌ ಜಲತಾಂರ್ಗಾಮಿಗಳನ್ನು ಅಭಿವೃದ್ಧಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.