ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ಅರಾರಿಯಾ (ಬಿಹಾರ): ‘ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರು ಎರಡು ವರ್ಷಗಳ ಹಿಂದೆ ನನಗೆ ವಿವಾಹವಾಗುವಂತೆ ಸಲಹೆ ನೀಡಿದ್ದರು. ಅವರ ಸಲಹೆ ಬಗ್ಗೆ ತಮ್ಮ ರಾಜಕೀಯ ಮಿತ್ರರು ಮತ್ತು ಕುಟುಂಬದ ಸ್ನೇಹಿತರ ಜತೆ ಮಾತುಕತೆ ನಡೆಯುತ್ತಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (55) ಲಘುದಾಟಿಯಲ್ಲಿ ತಮಾಷೆ ಮಾಡಿದರು.
ಮತದಾರರ ಅಧಿಕಾರ ಯಾತ್ರೆ’ಯು ಅರಾರಿಯಾ ತಲುಪಿದಾಗ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಹಾಸ್ಯ ಮಾಡಿದರು.
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಇತ್ತೀಚೆಗೆ ಆರ್‌ಜೆಡಿ ಅನ್ನು ತೀವ್ರವಾಗಿ ಟೀಕಿಸಿದ ಕುರಿತು ಸುದ್ದಿಗಾರರೊಬ್ಬರು ಲಾಲು ಅವರ ಪುತ್ರ ತೇಜಸ್ವಿ ಯಾದವ್ ಅವರನ್ನು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ ‘ಚಿರಾಗ್ ಅವರು ಮೊದಲು ಮದುವೆ ಆಗುವುದನ್ನು ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.
ಆಗ ತೇಜಸ್ವಿ ಅವರಿಂದ ಮೈಕ್ ಕಸಿದುಕೊಂಡ ರಾಹುಲ್ ‘ಇದೇ ರೀತಿಯ ಸಲಹೆಯನ್ನು ಎರಡು ವರ್ಷಗಳ ಹಿಂದೆ ತೇಜಸ್ವಿ ಅವರ ತಂದೆ ನನಗೆ ನೀಡಿದ್ದರು’ ಎಂದು ನಗೆ ಚಟಾಕಿ ಹಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.