ವಂದೇ ಭಾರತ್ ಎಕ್ಸ್‌ಪ್ರೆಸ್
ಬೆಂಗಳೂರು: ರೈಲು ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯ ಸಿಹಿ ಸುದ್ದಿಯೊಂದನ್ನು ನೀಡಿದೆ.
ಹೋಗಿ ಬರುವ ಎರಡೂ ಟಿಕೆಟ್ ಅನ್ನು (ರೌಂಡ್ ಟ್ರಿಪ್) ಒಟ್ಟಿಗೆ ಮುಂಗಡ ಕಾಯ್ಡಿರಿಸುವ ಪ್ರಯಾಣಿಕರಿಗೆ ಪ್ರಯಾಣ ದರದ ಮೇಲೆ ಶೇ 20 ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಿದೆ.
ಈ ಕೊಡುಗೆ ಇದೇ ಅಕ್ಟೋಬರ್ 13ರಿಂದ 26ರೊಳಗಿನ ಪ್ರಯಾಣ ಹಾಗೂ ನವೆಂಬರ್ 17ರಿಂದ ಡಿಸೆಂಬರ್ 1ರೊಳಗಿನ ಪ್ರಯಾಣದ ಬುಕಿಂಗ್ ಮೇಲೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ.
ಈ ರಿಯಾಯಿತಿ ಸೌಲಭ್ಯದ ಬುಕಿಂಗ್ ಆಗಸ್ಟ್ 14ರಿಂದ ಪ್ರಾರಂಭವಾಗುತ್ತದೆ.
ರೌಂಡ್ ಟ್ರಿಪ್ ಟಿಕೆಟ್ ಪ್ರಯಾಣದ ರಿಯಾಯಿತಿ ಸೌಲಭ್ಯ ಸಿಗಬೇಕಾದರೆ ಪ್ರಯಾಣದ ಆರಂಭ ಹಾಗೂ ಗಮ್ಯ ಬದಲಾಗುವಂತಿಲ್ಲ. ಯಾರ ಹೆಸರಿಗೆ ಹೋಗುವ ಟಿಕೆಟ್ ಬುಕ್ ಮಾಡಿರುತ್ತಾರೋ ರಿಟರ್ನ್ ಟಿಕೆಟ್ ಸಹ ಅದೇ ಹೆಸರಿಗೆ ಇದ್ದರೆ ಮಾತ್ರ ರಿಯಾಯಿತಿ ಅನ್ವಯವಾಗುತ್ತದೆ.
ಅಷ್ಟೇ ಅಲ್ಲದೇ ರಿಟರ್ನ್ ಟಿಕೆಟ್ ಬುಕಿಂಗ್ ಖಚಿತ ಆದ ಮೇಲೆಯೇ ಒಟ್ಟಾರೆ ರೌಂಡ್ ಟ್ರಿಪ್‌ನ ಶೇ 20 ರಷ್ಟು ರಿಯಾಯಿತಿ ಸಿಗುತ್ತದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
ದೀಪಾವಳಿ ಸೇರಿದಂತೆ ಇತರ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.