ADVERTISEMENT

ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರೆಹಾನಾ ಫಾತಿಮಾ

ಏಜೆನ್ಸೀಸ್
Published 28 ಜುಲೈ 2020, 13:32 IST
Last Updated 28 ಜುಲೈ 2020, 13:32 IST
ರೆಹಾನಾ ಫಾತೀಮಾ /– ಟ್ವಿಟರ್‌ ಚಿತ್ರ
ರೆಹಾನಾ ಫಾತೀಮಾ /– ಟ್ವಿಟರ್‌ ಚಿತ್ರ   

ನವದೆಹಲಿ: ಕೇರಳದ ವಿವಾದಿತ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರು ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಫಾತೀಮಾರ ಅರೆನಗ್ನ ದೇಹದ ಮೇಲೆ ಆಕೆಯ ಮಕ್ಕಳೇ ಚಿತ್ರ ಬಿಡಿಸುತ್ತಿದ್ದ ವಿಡಿಯೋ ಸಂಬಂಧಿತ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿತ್ತು. ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಕಾರಣ, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಆಕೆಯ ಜೀವನದ ಮೂಲಭೂತ ಹಕ್ಕು, ಸ್ವಾತಂತ್ರ್ಯ ಮತ್ತು ಘನತೆಯನ್ನು ಉಲ್ಲಂಘಿಸಿರುವ ತನ್ನ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ನಿರಾಕರಿಸಿರುವ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಫಾತಿಮಾ ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರು ಸೋಮವಾರ ಸಲ್ಲಿಸಿದ ಅರ್ಜಿಯಲ್ಲಿ, ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದು ಹೇಳಿದ್ದಾರೆ.

ADVERTISEMENT

ಈ ವಿಡಿಯೋವು 'ಲೈಂಗಿಕ ಸಂತೃಪ್ತಿ' ಉದ್ದೇಶಗಳಿಗಾಗಿ ಮಕ್ಕಳ ಅಶ್ಲೀಲ ಪ್ರಾತಿನಿಧ್ಯವನ್ನು ಹೊಂದಿದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ (ಪೊಕ್ಸೊ) ಸೆಕ್ಷನ್ 13 ರ ಅಡಿಯಲ್ಲಿ ಅಪರಾಧಗಳನ್ನು ಆಕರ್ಷಿಸುತ್ತದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಬಿ (ಐಟಿ ಕಾಯ್ದೆ) ಅಡಿ ಪ್ರಕರಣ ದಾಖಲಾಗಿರುವುದನ್ನು ಗಮನಿಸಿದೆ ಎಂದು ಕೇರಳ ಹೈಕೋರ್ಟ್ ಆಕೆಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.

ಅಪ್ರಾಪ್ತ ವಯಸ್ಸಿನ ತಮ್ಮ ಇಬ್ಬರು ಮಕ್ಕಳೆದುರು ಅರೆಬೆತ್ತಲೆಯಾಗಿ ಮಲಗಿ ತನ್ನ ದೇಹದ ಮೇಲೆ ಚಿತ್ರ ಬಿಡಿಸುವಂತೆ ರೆಹಾನಾ ಫಾತೀಮಾ ಮಕ್ಕಳಿಗೆ ಸೂಚಿಸಿದ್ದರು. ಈ ದೃಶ್ಯಗಳಿಗೆ ಬಾಡಿ ಆ್ಯಂಡ್​ ಪಾಲಿಟಿಕ್ಸಟ್​ ಎಂಬ ಶೀರ್ಷಿಕೆ ಕೂಡ ಕೊಟ್ಟಿದ್ದರು ಫಾತಿಮಾ. ಮಕ್ಕಳು ಚಿತ್ರ ಬಿಡಿಸುತ್ತಿರುವ ದೃಶ್ಯವು ಸಾಮಾಜಿಕ ಜಾತಲಾಣಗಳಲ್ಲಿ ವೈರಲ್ ಆಗಿತ್ತು.

ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್​​​ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ, 'ಎಡಿಟ್ ಮಾಡಿ ಅಪ್‌ಲೋಡ್ ಮಾಡಿದ ವಿಡಿಯೊದೊಂದಿಗಿನ ಅರ್ಜಿದಾರರ ಸಂದೇಶವು ತನ್ನ ಮಕ್ಕಳಿಗೆ ಸ್ತ್ರೀ ರೂಪವನ್ನು ಸಾಮಾನ್ಯೀಕರಿಸುವ ಉದ್ದೇಶವನ್ನು ಹೊಂದಿದೆ ಮತ್ತು ಲೈಂಗಿಕತೆಯ ವಿಕೃತ ವಿಚಾರಗಳನ್ನು ಅವರ ಮನಸ್ಸಿನಲ್ಲಿ ಬಿತ್ತುವ ಉದ್ದೇಶವನ್ನು ಹೊಂದಿಲ್ಲ ಎಂದು ಎಂದು ಸ್ಪಷ್ಟಪಡಿಸುತ್ತದೆ' ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.