ಜೈಪುರ: 71 ವರ್ಷದ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ತಾರಾಚಂದ್ ಅಗರ್ವಾಲ್ ಅವರು ಲೆಕ್ಕ ಪರಿಶೋಧಕ (ಸಿ.ಎ) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.
1976ರಲ್ಲಿ ಜೈಪುರದ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೆರ್‌ದಲ್ಲಿ (ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಕ್ಲರ್ಕ್ ಆಗಿ ಸೇರಿಕೊಂಡರು. 38 ವರ್ಷ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದ ಅವರು 2014ರಲ್ಲಿ ಸಹಾಯಕ ವ್ಯವಸ್ಥಾಪಕ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು.
ಅಗರ್ವಾಲ್, ಹನುಮಾನ್‌ಗಢದ ಸಂಗರಿಯಾ ಪ್ರದೇಶದವರು. 2020ರಲ್ಲಿ ಹೆಂಡತಿ ಸಾವಿನ ಬಳಿಕ ಮತ್ತೆ ಓದಲು ಆರಂಭಿಸಿದರು.
‘ಪಿಎಚ್.ಡಿ. ಮಾಡುವ ಆಸೆ ಹೊಂದಿದ್ದೆ. ಆದರೆ ಮಕ್ಕಳು ಸಿ.ಎ ಮಾಡುವಂತೆ ಸಲಹೆ ನೀಡಿದರು ಮತ್ತು ಆ ನಿಟ್ಟಿನಲ್ಲಿ ನನಗೆ ಎಲ್ಲ ಬೆಂಬಲವನ್ನು ನೀಡಿದ್ದರು’ ತಾರಾಚಂದ್ ಅಗರ್ವಾಲ್ ಹೇಳಿದ್ದಾರೆ.
ಬೆನ್ನು ನೋವಿನ ನಡುವೆಯೂ ಅಗರ್ವಾಲ್, ಪ್ರತಿದಿನ 10 ಗಂಟೆ ಅಭ್ಯಾಸ ಮಾಡುತ್ತಿದ್ದರು. ಅವರ ಹಿರಿಯ ಮಗ ದೆಹಲಿಯಲ್ಲಿ ಸಿ.ಎ ಆಗಿದ್ದು, ಎರಡನೇ ಮಗ ತೆರಿಗೆ ಸಂಬಂಧಿತ ವಿಷಯದ ಕುರಿತು ಅಧ್ಯಯನ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.