ADVERTISEMENT

ಶಬರಿಮಲೆ ಯಾತ್ರಿಕರ ವಾಹನಗಳಿಗೆ ತುರ್ತು ನೆರವು: ಸಹಾಯವಾಣಿ ಆರಂಭ

ಪಿಟಿಐ
Published 21 ನವೆಂಬರ್ 2025, 9:54 IST
Last Updated 21 ನವೆಂಬರ್ 2025, 9:54 IST
<div class="paragraphs"><p>ಶಬರಿಮಲೆ ದೇಗುಲ</p></div>

ಶಬರಿಮಲೆ ದೇಗುಲ

   

–ಪಿಟಿಐ ಚಿತ್ರ

ಪತ್ತನಂತಿಟ್ಟ (ಕೇರಳ): ತೀರ್ಥಯಾತ್ರೆ ಋತುವಿನಲ್ಲಿ ಶಬರಿಮಲೆ ಯಾತ್ರಿಗಳು ಪ್ರಯಾಣಿಸುವ ವಾಹನಗಳಿಗೆ ರಸ್ತೆ ಬದಿ ನೆರವು ನೀಡುವ ಸೇವೆಯನ್ನು ಕೇರಳ ಮೋಟಾರು ವಾಹನ ಇಲಾಖೆ (ಎಂವಿಡಿ) ಆರಂಭಿಸಿದ್ದಾಗಿ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ADVERTISEMENT

ಅಪಘಾತ, ಕೆಟ್ಟುಹೋದ ಅಥವಾ ಇನ್ನಿತರ ಯಾವುದೇ ತುರ್ತು ಸಂದರ್ಭದಲ್ಲಿ ಪತ್ತನಂತಿಟ್ಟ, ಕೋಟಯಂ ಹಾಗೂ ಇಡುಕ್ಕಿ ಜಿಲ್ಲೆಗಳ ರಸ್ತೆಯಲ್ಲಿ ಪ್ರಯಾಣಿಸುವಾಗ ಈ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಎಂವಿಡಿ ಹೇಳಿದೆ. ಇದಕ್ಕಾಗಿ ‘ಶಬರಿಮಲೆ ಸೇಫ್‌ ಝೋನ್ ಸಹಾಯವಾಣಿ’ಯನ್ನು ಆರಂಭಿಸಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಎಳವುಂಕಲ್, ಎರುಮೇಲಿ ಹಾಗೂ ಕುಟ್ಟಿಕಾನಂನಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಸಮಯದಲ್ಲಿ ತುರ್ತು ಸಹಾಯ ಪಡೆಯಬಹುದಾಗಿದೆ. ಕೆಟ್ಟು ಹೋದರೆ, ಕ್ರೇನ್ ಅಗತ್ಯ ಇದ್ದರೆ, ಆ್ಯಂಬುಲೆನ್ಸ್ ಸೇವೆ ಹಾಗೂ ಪ್ರಮುಖ ವಾಹನ ತಯಾರಕರಿಂದ ಸೇವೆಗಳು ಲಭ್ಯವಿರಲಿದೆ ಎಂದು ಎಂವಿಡಿ ಹೇಳಿದೆ.

ಶಬರಿಮಲೆಗೆ ಬರುವ ಯಾತ್ರಿಗಳಿಗೆ ಅಪಘಾತ ರಹಿತ ಸುರಕ್ಷಿತ ತೀರ್ಥಯಾತ್ರೆ ಅನುಭಯ ನೀಡಲು ಈ ಉಪಕ್ರಮ ಪರಿಚಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಬರಿಮಲೆ ಸೇಫ್‌ ಝೋನ್ ಸಹಾಯವಾಣಿ

ಎಳವುಂಕಲ್: 9400044991, 9562318181

ಎರುಮೇಲಿ: 9496367974, 8547639173

‌ಕುಟ್ಟಿಕಾನಂ: 9446037100, 8547639176

ಯಾವುದೇ ವಿಚಾರಣೆಗೆ safezonesabarimala@gmail.com ಮೂಲಕ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.