ADVERTISEMENT

ನಿಸ್ವಾರ್ಥಿ ಸಾಲುಮರದ ತಿಮ್ಮಕ್ಕ ಸಮಾಜಕ್ಕೆ ಮಾದರಿ: ನಟ ಪವನ್ ಕಲ್ಯಾಣ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2025, 7:18 IST
Last Updated 15 ನವೆಂಬರ್ 2025, 7:18 IST
   

‘ವೃಕ್ಷ ಮಾತೆ’ ಶತಾಯುಷಿ ಸಾಲುಮರದ ತಿಮ್ಮಕ್ಕ (114) ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ‘ನಿಸ್ವಾರ್ಥಿ ಸಾಲುಮರದ ತಿಮ್ಮಕ್ಕ ಸಮಾಜಕ್ಕೆ ಮಾದರಿ’ ಎಂದು ನಟ ಪವನ್ ಕಲ್ಯಾಣ್, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ.

‘ಆಂಧ್ರಪ್ರದೇಶದಲ್ಲಿ, ಪರಿಸರವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದವರನ್ನು ನಾವು ನೋಡಿದ್ದೇವೆ, ಮರಗಳನ್ನು ನಿರ್ದಯವಾಗಿ ಕಡಿದು, ಕಾಡುಗಳನ್ನು ನಾಶಮಾಡಿ, ಸ್ವಾರ್ಥ ಲಾಭಕ್ಕಾಗಿ ಪರಿಸರ ಸಂಪನ್ಮೂಲಗಳ ಕಳ್ಳಸಾಗಣೆ ಮಾಡಿದವರೆ ಹೆಚ್ಚು. ಆದರೆ ಇವರೆಲ್ಲಾಗಿಂತ ‘ವೃಕ್ಷಗಳ ತಾಯಿ’ ಸಾಲುಮರದ ತಿಮಕ್ಕ ವಿಭಿನ್ನ’ ಎಂದಿದ್ದಾರೆ.

‘ಕರ್ನಾಟಕದ ಒಂದು ಸಣ್ಣ ಹಳ್ಳಿಯಿಂದ ಬಂದ ತಿಮ್ಮಕ್ಕ ಮತ್ತು ಅವರ ಪತಿ, ಮರ ಗಿಡಗಳನ್ನು ನೆಟ್ಟು,ಅವುಗಳನ್ನು ತಮ್ಮ ಮಕ್ಕಳಂತೆ ಸಾಕಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮರಗಿಡಳ ಮೇಲೆ ನಿಷ್ಕಲ್ಮಶ ಪ್ರೀತಿ, ದೈನಂದಿನ ಶ್ರಮದಿಂದ ಅವರು ಪ್ರಕೃತಿಗೆ ನಿಸ್ವಾರ್ಥ ಕೊಡುಗೆ ನೀಡಿದ್ದಾರೆ. 375 ಹೆಚ್ಚು ಆಲದ ಮರ ಹಾಗೂ 8,000 ಕ್ಕೂ ಹೆಚ್ಚು ಇತರೆ ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ. ಸಂಪತ್ತು ಮಾಡುವುದು ಅವರ ಗುರಿಯಾಗಿರಲಿಲ್ಲ. ಅದರ ಬದಲು ಭೂಮಿತಾಯಿಗೆ ಕೊಡುಗೆ ನೀಡುವುದು ಅವರ ಮುಖ್ಯ ಉದ್ದೇಶವಾಗಿತ್ತು’ ಎಂದು ತಿಮ್ಮಕ್ಕನವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ್ದಾರೆ.

ADVERTISEMENT

‘ವೃಕ್ಷಗಳ ತಾಯಿ’ ಪ್ರಕೃತಿಗೆ ನೀಡಿದ ಕೊಡುಗೆಯನ್ನು ಸಮಾಜದ ಪ್ರತಿಯೊಬ್ಬರು ಪಾಲಿಸುವುದೇ ಅವರಿಗೆ ಸಲ್ಲುವ ಗೌರವ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.