ADVERTISEMENT

ಭಾರತ ಬಂದ್: ಬ್ಯಾಂಕಿಂಗ್ ವಹಿವಾಟಿಗೆ ಭಾಗಶಃ ಧಕ್ಕೆ ಸಾಧ್ಯತೆ

ಮಂಗಳವಾರದ ಮುಷ್ಕರಕ್ಕೆ ಮಾತ್ರ ಆರ್‌ಬಿಐ ಸಿಬ್ಬಂದಿ ಬೆಂಬಲ

ಪಿಟಿಐ
Published 7 ಜನವರಿ 2019, 14:35 IST
Last Updated 7 ಜನವರಿ 2019, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಎಲ್ಲಾ ಬ್ಯಾಂಕ್‌ಗಳ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಬ್ಯಾಂಕಿಂಗ್‌ ವಲಯದ ವಹಿವಾಟಿಗೆ ಭಾಗಶಃ ಧಕ್ಕೆಯಾಗಲಿದೆ ಎಂದು ಬ್ಯಾಂಕಿಂಗ್‌ ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಎಲ್ಲಾ ಶಾಖೆಗಳು ಮಂಗಳವಾರ ಮತ್ತು ಬುಧವಾರವೂ ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ. ಜತೆಗೆ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್ ಮತ್ತು ಬ್ಯಾಂಕ್‌ ಆಫ್ ಇಂಡಿಯಾ ಸಹ ಎರಡೂ ದಿನಗಳು ಎಂದಿನಂತೆ ವಹಿವಾಟಿಗೆ ತೆರೆದಿರಲಿವೆ’ ಎಂದುಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ (ಯುಎಫ್‌ಬಿಯು) ಪಶ್ಚಿಮ ಬಂಗಾಳದ ಸಂಚಾಲಕ ಸಿದ್ದಾರ್ಥ ಖಾನ್‌ ತಿಳಿಸಿದ್ದಾರೆ.

ADVERTISEMENT

‘ಬ್ಯಾಂಕ್‌ ಒಕ್ಕೂಟಗಳಲ್ಲಿ ಎಐಬಿಇಎ ಮತ್ತು ಬಿಇಎಫ್‌ಐ ಮಾತ್ರವೇ ಮುಷ್ಕರಕ್ಕೆ ಕರೆ ನೀಡಿವೆ. ಹೀಗಾಗಿ ಕೆಲವೇ ಕೆಲವು ಬ್ಯಾಂಕ್‌ಗಳು ಮಾತ್ರವೇ ಮುಷ್ಕರದಲ್ಲಿ ಭಾಗವಹಿಸಲಿದ್ದು, ಆ ಬ್ಯಾಂಕ್‌ಗಳ ವಹಿವಾಟಿಗೆ ಧಕ್ಕೆಯಾಗಲಿದೆ’ ಎಂದು ಖಾನ್‌ ಹೇಳಿದ್ದಾರೆ.

‘ಯಾವುದೇ ರೀತಿಯ ಮುಷ್ಕರ ನಡೆದಾಗಲೂ ಬ್ಯಾಂಕಿಂಗ್‌ ವಹಿವಾಟಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಪ್ರಯತ್ನ ನಡೆಸುತ್ತೇವೆ. ಮಂಗಳವಾರ ಮತ್ತು ಬುಧವಾರ ವಹಿವಾಟು ನಡೆಯುವ ನಿರೀಕ್ಷೆ ಇದೆ’ ಎಂದು ಎಸ್‌ಬಿಐನ ಪಶ್ಚಿಮ ಬಂಗಾಳ ವೃತ್ತದ ಸಿಜಿಎಂ ಆರ್‌.ಕೆ. ಮಿಶ್ರಾ ತಿಳಿಸಿದ್ದಾರೆ.

ಮಂಗಳವಾರದ ಮುಷ್ಕರಕ್ಕೆ ಮಾತ್ರ ಆರ್‌ಬಿಐ ಸಿಬ್ಬಂದಿ ಬೆಂಬಲಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.