ADVERTISEMENT

ಬಾಲ್ಯದ ಮನೆಗೆ 35 ವರ್ಷಗಳ ಬಳಿಕ ಭೇಟಿ ನೀಡಿ ಕಣ್ಣೀರಾದ ಸ್ಮೃತಿ ಇರಾನಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 10:08 IST
Last Updated 15 ಸೆಪ್ಟೆಂಬರ್ 2018, 10:08 IST
   

ನವದೆಹಲಿ: ಕೇಂದ್ರ ಸಚಿವೆ ಹಾಗೂ ಕಿರುತೆರೆ ಮಾಜಿ ನಟಿ ಸ್ಮೃತಿ ಇರಾನಿ ಅವರು ಗುರುಗ್ರಾಮದಲ್ಲಿರುವ ತಮ್ಮ ಮನೆಗೆ 35 ವರ್ಷಗಳ ಬಳಿಕ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಸ್ನೇಹಿತೆ ಹಾಗೂನಿರ್ಮಾಪಕಿ ಏಕ್ತಾ ಕಪೂರ್‌ ಅವರ ಇನ್ನಷ್ಟೇ ಪ್ರಸಾರವಾಗಬೇಕಿರುವ ವೆಬ್‌ ಸೀರೀಸ್‌ ಹೋಮ್‌ನ ಪ್ರಚಾರ ಕಾರ್ಯಕ್ರಮಕ್ಕಾಗಿ ಗುರುಗ್ರಾಮಕ್ಕೆ ಆಗಮಿಸಿದ್ದರು. ಇಲ್ಲಿಯೇ ಅವರು ಬಾಲ್ಯದಲ್ಲಿ ವಾಸವಿದ್ದ ಮನೆ ಇದ್ದದ್ದು. ಆದರೆ ಆ ಮನೆ ಇದೀಗ ಡ್ರೈ ಕ್ಲೀನಿಂಗ್‌ ಶಾಪ್‌ ಆಗಿ ಮಾರ್ಪಟ್ಟಿದೆ.

ವಾಸ್ತವದಲ್ಲಿ ತಾವಿದ್ದ ಮನೆಯ ಚಿತ್ರಣವೇ ಬದಲಾಗಿರುವುದನ್ನು ಕಂಡ ಸಚಿವೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಜೊತೆಗೆ ನೆರೆಹೊರೆಯ ಜನರನ್ನು ಕಂಡು ಹಳೆ ನೆನಪುಗಳಿಗೆ ಜಾರಿದ್ದಾರೆ. ಆಲ್ಟ್‌ ವಾಹಿನಿಯಲ್ಲಿ ಹೋಮ್‌ ಕಾರ್ಯಕ್ರಮ ಸೆಪ್ಟೆಂಬರ್‌ 21ರಿಂದ ಪ್ರಸಾರವಾಗಲಿದೆ.

ADVERTISEMENT

ಈ ಸಂದರ್ಭದಲ್ಲಿ ಸೆರೆಹಿಡಿಯಲಾಗಿರುವ ದೃಶ್ಯಾವಳಿಯನ್ನು ಏಕ್ತಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಮನೆಯೆಂದರೆ ಕೇವಲ ನಾಲ್ಕು ಗೋಡೆಗಳಲ್ಲ. ಕುಟುಂಬ ಮತ್ತು ಪ್ರೀತಿಯಿಂದ ಮನೆ ನಿರ್ಮಾಣವಾಗುತ್ತದೆ. ಸ್ಮೃತಿ ಇರಾನಿ ಮತ್ತೆ ತಮ್ಮ ಬಾಲ್ಯದ ಮನೆಗೆ ಭೇಟಿ ನೀಡಿದ್ದಾರೆ. ಮತ್ತು ತಮ್ಮ ನನ್ನ ಮನೆ ಕಥೆಯನ್ನು ಮೊದಲ ಸಲ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅವರ ಭಾವುಕ ಪಯಣವನ್ನು ನೋಡಿ’ ಎಂದು ಬರೆದುಕೊಂಡಿದ್ದಾರೆ.

ಏಕ್ತಾ–ಇರಾನಿ ಜೋಡಿ 2000–2008ರ ವರೆಗೆ ಪ್ರಸಾರವಾಗಿದ್ದ ಕ್ಯೂಂಕೀ ಸಾಸ್‌ ಭಿ ಕಭಿ ಬಹೂಥೀ ಧಾರವಾಹಿ ಜನಪ್ರಿಯತೆ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.