ADVERTISEMENT

ಗುರುಗ್ರಾಮ ಗುಂಡಿನ ದಾಳಿ ಪ್ರಕರಣ: ನ್ಯಾಯಾಧೀಶರ ಪುತ್ರ ಸಾವು

ಏಜೆನ್ಸೀಸ್
Published 23 ಅಕ್ಟೋಬರ್ 2018, 3:04 IST
Last Updated 23 ಅಕ್ಟೋಬರ್ 2018, 3:04 IST
   

ನವದೆಹಲಿ: ಗುರುಗ್ರಾಮದ ಸೆಕ್ಟರ್‌ 49ರ ಆರ್ಕೇಡಿಯಾ ಮಾರ್ಕೆಟ್‌ನ ಹೊರಭಾಗದಲ್ಲಿ ಅಂಗರಕ್ಷಕನಿಂದಲೇ ಗುಂಡಿನ ದಾಳಿಗೆ ಒಳಗಾಗಿದ್ದ ಹೆಚ್ಚುವರಿ ಸೆಷೆನ್ಸ್‌ ನ್ಯಾಯಾಧೀಶರ ಪುತ್ರ ಧ್ರುವ(18) ಮಂಗಳವಾರ ಮೃತಪಟ್ಟಿದ್ದಾರೆ.

ಗುಂಡೇಟು ತಲೆಗೆ ತಗುಲಿ ಮಿದುಳು ನಿಷ್ಕ್ರಿಯಗೊಂಡು ಧ್ರುವ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದರು. ದಾಳಿಯಲ್ಲಿ ಗಾಯಗೊಂಡಿದ್ದ ನ್ಯಾಯಾಧೀಶ ಕೃಷ್ಣಕಾಂತ್ ಪತ್ನಿ ರಿತು ಗಾರ್ಗ್(45) ಅ.14ರಂದು ಮೃತಪಟ್ಟರು.ಅಕ್ಟೋಬರ್‌ 13ರಂದು ನಡೆದಿದ್ದ ಶೂಟ್‌ಔಟ್‌ಗೆ ಸಂಬಂಧಿಸಿದಂತೆ ಹಂತಕ ಗನ್‌ಮ್ಯಾನ್‌ ಮಹಿಪಾಲ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡಲು ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡ ರಚಿಸಿದೆ. ‘ಮಹಿಪಾಲ್ ಆಗಾಗ್ಗೆ ತನ್ನ ಹೇಳಿಕೆ ಬದಲಿಸುತ್ತಿದ್ದಾನೆ. ಕುಟುಂಬದ ಸಮಸ್ಯೆಗಳಿಂದ ಆತ ಖಿನ್ನತೆಗೆ ಒಳಗಾಗಿದ್ದಾನೆ’ ಎಂದು ವಿಶೇಷ ತನಿಖಾ ತಂಡದ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.

ADVERTISEMENT

ಗುಂಡು ಹೊಡೆದ ನಂತರ ಮಹಿಪಾಲ್‌ ನ್ಯಾಯಾಧೀಶರ ಪುತ್ರ ಧ್ರುವನನ್ನು ಕಾರಿನೊಳಗೆ ಕೂರಿಸಲು ನಡೆಸಿದ ಎಳೆದಾಟ, ರಕ್ತ ಸುರಿಯುತ್ತಿದ್ದ ಆತನನ್ನು ರಸ್ತೆಯಲ್ಲಿಯೇ ಬಿಟ್ಟು ಹೊರಟ್ಟಿದ್ದ ವಿಡಿಯೊ ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.