ಸ್ಪೈಸ್‌ಜೆಟ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಟೇಕಾಫ್ ಆಗುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿ ಗೊಂದಲ ಸೃಷ್ಟಿಸಿದ ಇಬ್ಬರು ಪ್ರಯಾಣಿಕರನ್ನು ಕೆಳಗಿಳಿಸಿ, ಸಿಐಎಸ್‌ಎಫ್ (ಭದ್ರತಾ ಸಿಬ್ಬಂದಿ) ವಶಕ್ಕೆ ನೀಡಲಾಗಿದೆ.
ಜುಲೈ 14ರಂದು ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದೆ. ‘ವಿಮಾನದ ಸಿಬ್ಬಂದಿ, ಸಹ ಪ್ರಯಾಣಿಕರು ಎಷ್ಟೇ ಮನವಿ ಮಾಡಿದರೂ ತಮ್ಮ ಆಸನಗಳಿಗೆ ಇಬ್ಬರೂ ಮರಳಿರಲಿಲ್ಲ. ಹೀಗಾಗಿ ನಿಲುಗಡೆ ಸ್ಥಳಕ್ಕೆ ವಾಪಸಾಗಿ ಅವರನ್ನು ಕೆಳಗಿಳಿಸಲಾಯಿತು’ ಎಂದು ಸ್ಪೈಸ್‌ಜೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ನಿಗದಿಯಂತೆ ಮಧ್ಯಾಹ್ನ 12.30ಕ್ಕೆ ದೆಹಲಿಯಿಂದ ಹೊರಡಬೇಕಿದ್ದ ವಿಮಾನ ಸಂಜೆ 7.21ಕ್ಕೆ ನಿರ್ಗಮಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.