ನವದೆಹಲಿ: ಶ್ರೀಲಂಕಾದಲ್ಲಿಈಸ್ಟರ್ ದಿನದಂದು ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರಝೈನೀ ಹಶೀಂ ಕೇರಳ ಮತ್ತು ತಮಿಳುನಾಡಿನಲ್ಲಿರುವ 12ಕ್ಕೂ ಹೆಚ್ಚು ಜನರಿಗೆ ಮೊಬೈಲ್ ಕರೆ ಮಾಡಿರುವ ಮಾಹಿತಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಲಭ್ಯವಾಗಿದೆ.
ಇದನ್ನೂ ಓದಿ:ಕಾಸರಗೋಡಿನ ಇಬ್ಬರ ಮನೆಗೆ ಎನ್ಐಎ ದಾಳಿ
ಝೈನೀ ಹಶೀಂ ಕರೆ ಮಾಡಿರುವ ಸಿಡಿಆರ್ (ಮೊಬೈಲ್ ಕರೆ ವಿವರ) ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಸಂಗ್ರಹಿಸಿದೆ.ಝೈನೀ ಹಶೀಂಭಾರತದಲ್ಲಿ ಮೂರು ತಿಂಗಳು ಕಳೆದು ನಂತರ ಶ್ರೀಲಂಕಾಕ್ಕೆ ತೆರಳಿದ್ದ. ಈ ವೇಳೆ ಶ್ರೀಲಂಕಾದಿಂದ ಕೇರಳ ಮತ್ತು ತಮಿಳುನಾಡಿನಲ್ಲಿರುವ ಹಲವರಿಗೆ ಕರೆ ಮಾಡಿರುವ ಮಾಹಿತಿ ರಾಷ್ಟ್ರೀಯ ತನಖಾ ಸಂಸ್ಥೆಗೆ ಲಭ್ಯವಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.ಈಸ್ಟರ್ ದಿನದಂದು ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಜನರ ಮೃತಪಟ್ಟಿದ್ದರು.
ರಾಷ್ಟ್ರೀಯ ತನಿಖಾ ಸಂಸ್ಥೆಯುಝೈನೀ ಹಶೀಂ ಜೊತೆ ಸಂಪರ್ಕ ಹೊಂದಿದ್ದ ಮೂವರನ್ನು ಕೇರಳದಲ್ಲಿ ಸೋಮವಾರ ಬಂಧಿಸಲಾಗಿದೆ. ಬಂಧಿತರುಐಎಸ್ ಉಗ್ರರ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.