ADVERTISEMENT

ರಾಜ್ಯ ಸ್ಥಾಪನೆ ದಿನ: ಮಣಿಪುರ, ಮೇಘಾಲಯ, ತ್ರಿಪುರಾ ಜನರಿಗೆ ಪ್ರಧಾನಿ ಮೋದಿ ಶುಭಾಶಯ

ಪಿಟಿಐ
Published 21 ಜನವರಿ 2026, 6:41 IST
Last Updated 21 ಜನವರಿ 2026, 6:41 IST
<div class="paragraphs"><p>ಮಣಿಪುರ ಜನಾಂಗೀಯ ಹಿಂಸಾಚಾರದಲ್ಲಿ ಸಂತ್ರಸ್ತರಾಗಿ ಪರಿಹಾರದ ಶಿಬಿರದಲ್ಲಿ ನೆಲಸಿರುವ ಜನರ ಜತೆ ಪ್ರಧಾನಿ ನರೇಂದ್ರ ಮೋದಿ  ಮಾತುಕತೆ ನಡೆಸಿದರು. (ಫೈಲ್‌ ಚಿತ್ರ)</p></div>

ಮಣಿಪುರ ಜನಾಂಗೀಯ ಹಿಂಸಾಚಾರದಲ್ಲಿ ಸಂತ್ರಸ್ತರಾಗಿ ಪರಿಹಾರದ ಶಿಬಿರದಲ್ಲಿ ನೆಲಸಿರುವ ಜನರ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. (ಫೈಲ್‌ ಚಿತ್ರ)

   

ನವದೆಹಲಿ: ಮೇಘಾಲಯ, ಮಣಿಪುರ ಹಾಗೂ ತ್ರಿಪುರಾ ರಾಜ್ಯಗಳ ಸ್ಥಾಪನೆಯ ದಿನವಾದ ಇಂದು (ಜ.21) ಅಲ್ಲಿನ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

ಈಶಾನ್ಯ ಪ್ರದೇಶ ಕಾಯ್ದೆ–1971ರ ಅಡಿಯಲ್ಲಿ ಈ ಮೂರೂ ರಾಜ್ಯಗಳು 1972ರ ಜನವರಿ 21 ರಂದು ರಚನೆಯಾಗಿದ್ದವು.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ಮಣಿಪುರದ ಜನತೆ ನಿಷ್ಠೆ ಹಾಗೂ ಪರಿಶ್ರಮದ ಮೂಲಕ ದೇಶದ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯವು ಅಭಿವೃದ್ಧಿ ಪಥದಲ್ಲಿ ಸ್ಥಿರವಾಗಿ ಮುನ್ನಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. 

ಮಣಿಪುರದ ಜನರಿಗೆ ಕ್ರೀಡೆಗಳ ಮೇಲಿರುವ ಆಸಕ್ತಿ, ಸಮೃದ್ಧ ಸಾಂಸ್ಕೃತಿಕ ಪರಂಪರೆ ಹಾಗೂ ಪ್ರಕೃತಿಯೊಂದಿಗೆ ಇರುವ ಆಪ್ತ ಸಂಬಂಧ ಅತ್ಯಂತ ಗಮನಾರ್ಹವಾಗಿವೆ ಎಂದು ಮೋದಿ ಹೇಳಿದ್ದಾರೆ. 

ಮೇಘಾಲಯದ ಜನರಿಗೆ ರಾಜ್ಯ ಸ್ಥಾಪನಾ ದಿನದ ಶುಭಾಶಯಗಳು, ಈ ನಾಡಿನ ಜನರ ಸಾಧನೆಗಳು ದೇಶದ ಪ್ರಗತಿಗೆ ಪ್ರಮುಖ ಕೊಡುಗೆಗಳಾಗಿವೆ ಎಂದು ಅವರು ಹೇಳಿದ್ದಾರೆ. ಹಾಗೇ ತ್ರಿಪುರಾದ ಜನರಿಗೂ ಶುಭಾಶಯ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.