ADVERTISEMENT

ಸ್ಫೋಟಕ ತುಂಬಿದ್ದ ವಾಹನ ಪತ್ತೆ: ಎನ್‌ಐಎಯಿಂದ ಅಪರಾಧ ಕೃತ್ಯದ ಸನ್ನಿವೇಶ ಮರುಸೃಷ್ಟಿ

ಎಸ್‌ಯುವಿಯಲ್ಲಿ ಸ್ಪೋಟಕ ಪತ್ತೆ ಪ್ರಕರಣ

ಪಿಟಿಐ
Published 20 ಮಾರ್ಚ್ 2021, 8:26 IST
Last Updated 20 ಮಾರ್ಚ್ 2021, 8:26 IST
ಮುಂಬೈನಲ್ಲಿ ಸ್ಪೋಟಕ ತುಂಬಿದ ಎಸ್‌ಯವಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಮತ್ತು ಎನ್‌ಐಎ ವಿಧಿ ವಿಜ್ಞಾನ ತಜ್ಞರು ತನಿಖೆಯ ಭಾಗವಾಗಿ ಶುಕ್ರವಾರ ರಾತ್ರಿ ಘಟನಾ ಸ್ಥಳದಲ್ಲಿ, ಪ್ರಕರಣದ ಆರೋಪಿ ಸಚಿನ್ ವಾಜೆ ಅವರೊಂದಿಗೆ ಅಪರಾಧ ದೃಶ್ಯವನ್ನು ಮರುಸೃಷ್ಟಿಸುವ ಪ್ರಕ್ರಿಯೆಯಲ್ಲಿ ತೊಡಗಿರುವುದು.
ಮುಂಬೈನಲ್ಲಿ ಸ್ಪೋಟಕ ತುಂಬಿದ ಎಸ್‌ಯವಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಮತ್ತು ಎನ್‌ಐಎ ವಿಧಿ ವಿಜ್ಞಾನ ತಜ್ಞರು ತನಿಖೆಯ ಭಾಗವಾಗಿ ಶುಕ್ರವಾರ ರಾತ್ರಿ ಘಟನಾ ಸ್ಥಳದಲ್ಲಿ, ಪ್ರಕರಣದ ಆರೋಪಿ ಸಚಿನ್ ವಾಜೆ ಅವರೊಂದಿಗೆ ಅಪರಾಧ ದೃಶ್ಯವನ್ನು ಮರುಸೃಷ್ಟಿಸುವ ಪ್ರಕ್ರಿಯೆಯಲ್ಲಿ ತೊಡಗಿರುವುದು.   

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಸಮೀಪ ಸ್ಪೋಟಕಗಳಿದ್ದ ಎಸ್‌ಯುವಿ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ), ತನಿಖೆಯ ಭಾಗವಾಗಿ ಘಟನೆ ನಡೆದ ಸ್ಥಳದಲ್ಲಿ ಕೃತ್ಯದ ಸನ್ನಿವೇಶವನ್ನುಮರು ಸೃಷ್ಟಿಸಿತು.

‘ಪ್ರಕರಣದ ಆರೋಪಿಯಾಗಿ‌ರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು, ಅಪರಾಧದ ಸನ್ನಿವೇಶವನ್ನು ಮರು ಸೃಷ್ಟಿಸಲಾಯಿತು.ಈ ವೇಳೆ ತನಿಖಾಧಿಕಾರಿಗಳು ವಾಜೆ ಅವರಿಗೆ ಬಿಳಿ ಕುರ್ತಾ ಧರಿಸಿ ಸ್ವಲ್ಪ ದೂರದವರೆಗೆ ನಡೆದಾಡುವಂತೆ ಸೂಚಿಸಿದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಘಟನೆ ನಡೆದ ದಿನ ಕಾರ್‌ಮೈಕಲ್‌ ರಸ್ತೆಯಲ್ಲಿ ಬಿಳಿ ಖುರ್ತಾ ಧರಿಸಿದ್ದ ವ್ಯಕ್ತಿಯೊಬ್ಬರು ಓಡಾಡುತ್ತಿದ್ದುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆ ವ್ಯಕ್ತಿ ವಾಜೆಯಾಗಿರಬಹುದು ಎಂದು ಎನ್‌ಐಎ ಅಧಿಕಾರಿಗಳು ಶಂಕಿಸಿದ್ದರು. ಆದರೆ, ಅದು ಇನ್ನೂ ಖಚಿತವಾಗಬೇಕಿದೆ‘ ಎಂದು ಅಧಿಕಾರಿ ಹೇಳಿದ್ದಾರೆ.

ADVERTISEMENT

‘ಶುಕ್ರವಾರ ರಾತ್ರಿ ವಾಜೆ ಮತ್ತು ತನಿಖಾಧಿಕಾರಿಗಳು 30 ನಿಮಿಷಗಳಿಗೂ ಹೆಚ್ಚು ಕಾಲ ಘಟನಾ ಸ್ಥಳದಲ್ಲಿದ್ದರು. ಅಪರಾಧದ ಸನ್ನಿವೇಶವನ್ನು ಮರುಸೃಷ್ಟಿ ಮಾಡಿದ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡ್ ಮಾಡಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಫೆ. 25 ರಂದು ಮುಕೇಶ್ ಅಂಬಾನಿಯ ಬಹುಮಹಡಿ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳು ತುಂಬಿದ ಎಸ್‌ಯುವಿ ವಾಹನ ಮತ್ತು ಅದರೊಳಗೆ ಬೆದರಿಕೆ ಪತ್ರವೊಂದು ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.