ADVERTISEMENT

ಉತ್ತರ ಪ್ರದೇಶ | ಒಂದು ಕೆ.ಜಿ ಕರ್ಜಿಕಾಯಿಯ ಬೆಲೆ ₹50 ಸಾವಿರ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2025, 10:08 IST
Last Updated 13 ಮಾರ್ಚ್ 2025, 10:08 IST
<div class="paragraphs"><p>ಕರ್ಜಿಕಾಯಿ</p></div>

ಕರ್ಜಿಕಾಯಿ

   

ಗೊಂಡಾ (ಉತ್ತರ ಪ್ರದೇಶ): ದೇಶದಾದ್ಯಂತ ಹೋಳಿ ಸಂಭ್ರಮ ಆರಂಭವಾಗಿದ್ದು, ಸಿಹಿ ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಬೇಕರಿಯೊಂದರಲ್ಲಿ ವಿಶೇಷವಾದ ಚಿನ್ನದ ಕರ್ಜಿಕಾಯಿ (ಗುಜಿಯಾ) ಮಾರಾಟ ಮಾಡಲಾಗುತ್ತಿದ್ದು, ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.

ಈ ಚಿನ್ನದ ಕರ್ಜಿಕಾಯಿ ಬೆಲೆ ಒಂದು ಕೆ.ಜಿಗೆ ಬರೋಬ್ಬರಿ ₹50 ಸಾವಿರ ಹಾಗೂ ಒಂದು ಕರ್ಜಿಕಾಯಿಯ ₹1,300ಕ್ಕೆ ಇಲ್ಲಿ ಮಾರಾಟವಾಗುತ್ತಿದೆ

ADVERTISEMENT

ಈ ಕುರಿತು ಎಎನ್ಐ ಜತೆಗೆ ಮಾತನಾಡಿರುವ ಅಂಗಡಿಯ ವ್ಯವಸ್ಥಾಪಕ ಶಿವಕಾಂತ್ ಚತುರ್ವೇದಿ, ‘ಈ ವಿಶೇಷ ಕರ್ಜಿಕಾಯಿಯ ಮೇಲೆ 24 ಕ್ಯಾರೆಟ್‌ನ ಒಂದು ತೆಳು ಚಿನ್ನದ ಪದರದ ಲೇಪನವಿದೆ. ಅಲ್ಲದೆ ಒಣ ಹಣ್ಣುಗಳನ್ನು ಅದರೊಳಗೆ ಹಾಕಲಾಗಿದೆ, ಹೀಗಾಗಿ ಇದರ ಬೆಲೆ ದುಬಾರಿ’ ಎಂದು ತಿಳಿಸಿದ್ದಾರೆ.

‘ಸಾಂಪ್ರದಾಯಿಕ ಕರ್ಜಿಕಾಯಿಗಳು ಸಾಮಾನ್ಯವಾಗಿ ಹಾಲಿನ ಕೋವಾ, ಬೀಜಗಳು ಮತ್ತು ಒಣಗಿದ ಹಣ್ಣುಗಳಿಂದ ತುಂಬಿದ ಸಿಹಿ ತಿನಿಸಾಗಿದೆ. ಈ ವಿಶೇಷ ಕರ್ಜಿಕಾಯಿಗೆ ಚಿನ್ನದ ಲೇಪನ ಮಾಡಿದ ಕಾರಣದಿಂದ ಹೊಂಬಣ್ಣದಿಂದ ಹೊಳೆಯುತ್ತಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದಲ್ಲದೆ ಲಖನೌನ ಅಂಗಡಿಯೊಂದರಲ್ಲಿ 25 ಇಂಚಿನ, 6 ಕೆ.ಜಿ ತೂಕದ ಕರ್ಜಿಕಾಯಿ ತಯಾರಿಸಲಾಗಿದೆ. ಇದು ಹೊಸ ದಾಖಲೆ ನಿರ್ಮಿಸಿದ್ದು, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಪಟ್ಟಿಗೆ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.