ADVERTISEMENT

ಫೇಸ್‌ಬುಕ್ ಪೇಜ್‌ ಹ್ಯಾಕ್; ಕ್ರಮಕ್ಕೆ ಒತ್ತಾಯಿಸಿದ TMC ಸಂಸದ ಅಭಿಷೇಕ್ ಬ್ಯಾನರ್ಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2025, 5:39 IST
Last Updated 13 ಫೆಬ್ರುವರಿ 2025, 5:39 IST
<div class="paragraphs"><p>ಅಭಿಷೇಕ್ ಬ್ಯಾನರ್ಜಿ</p></div>

ಅಭಿಷೇಕ್ ಬ್ಯಾನರ್ಜಿ

   

ಪಿಟಿಐ ಚಿತ್ರ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರು ತಮ್ಮ ಅಧಿಕೃತ ಫೇಸ್‌ಬುಕ್‌ ಪುಟವನ್ನು ಕಿಡಿಗೇಡಿಗಳು ಹ್ಯಾಕ್‌ ಮಾಡಿದ್ದಾರೆ ಎಂದು ಆರೋಪಿಸಿ 'ಮೆಟಾ' ಸಂಸ್ಥೆಗೆ ದೂರು ನೀಡಿದ್ದಾರೆ.

ADVERTISEMENT

ತಮ್ಮ ವಕೀಲ ಸಂಜಯ್‌ ಬಸು ಅವರ ಮೂಲಕ 'ಮೆಟಾ' ಸಂಸ್ಥೆಗೆ ಗುರುವಾರ ಪತ್ರ ಬರೆದಿರುವ ಅಭಿಷೇಕ್‌, ಫೇಸ್‌ಬುಕ್‌ ಪುಟದಲ್ಲಿ ಮಾಹಿತಿಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.

ಕಂಪನಿಯು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ಇಲ್ಲದಿದ್ದರೆ ಮೆಟಾ ವಿರುದ್ಧವೇ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.