
ಈ ದಿನದ ಪ್ರಮುಖ 10 ಸುದ್ದಿಗಳು
ರಾಷ್ಟ್ರೀಯ, ರಾಜ್ಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.
ನವದೆಹಲಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಕೆಲ ಅಂಶಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಪ್ರಸರಣವಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ‘ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ’ಗೆ ದೆಹಲಿ ಪೊಲೀಸ್ ವಿಶೇಷ ದಳವು ನೋಟಿಸ್ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್) ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರ ನೇಮಕಕ್ಕೆ ವಿರೋಧ ಪಕ್ಷದ ನಾಯಕರು, ಸಂಸದರು ಸೇರಿದಂತೆ ಹಲವರು ಮತ್ತೆ ಅಪಸ್ವರ ಎತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ವಿರೋಧಿಸಿ 10ಕ್ಕೂ ಹೆಚ್ಚು ಕಾರ್ಮಿಕ ಸಂಘಗಳು ನಾಳೆ (ಫೆ.12) 'ಭಾರತ ಬಂದ್'ಗೆ ಕರೆ ನೀಡಿವೆ. ಪರಿಣಾಮವಾಗಿ ಬ್ಯಾಂಕಿಂಗ್, ಸಾರಿಗೆ ಹಾಗೂ ಇತರ ಕೆಲವು ಸೇವೆಗಳಿಗೆ ಗುರುವಾರ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
‘ಮೈಸೂರಿನಲ್ಲಿರುವ, ರಾಷ್ಟ್ರಕವಿ ಕುವೆಂಪು ಅವರ ‘ಉದಯರವಿ’ ಮನೆಯನ್ನು ಮಾರುವ ಅಥವಾ ಸರ್ಕಾರಕ್ಕೆ ಹಸ್ತಾಂತರಿಸುವ ಉದ್ದೇಶ ನಮ್ಮ ಮುಂದಿಲ್ಲ. ನಾವೇ ವಸ್ತುಸಂಗ್ರಹಾಲಯವನ್ನಾಗಿ ರೂಪಿಸುತ್ತೇವೆ’ ಎಂದು ಕುಟುಂಬ ತಿಳಿಸಿದೆ.
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಟೀಕೆ ಮುಂದುವರಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಕೇಂದ್ರ ಸರ್ಕಾರವು ಟ್ರಂಪ್ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅವರಿಗೆ ಶರಣಾಗಿದೆ. ರೈತರ ಹಿತಾಸಕ್ತಿಯನ್ನು ಕೂಡ ಬಲಿಕೊಟ್ಟಿದೆ. ಈ ಒಪ್ಪಂದವು ಭಾರತ ಮಾತೆಯನ್ನು ಮಾರಿದಂತೆ’ ಎಂದು ಕಿಡಿಕಾರಿದ್ದಾರೆ.
ಟೊರಾಂಟೊ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಟಂಬ್ಲರ್ ರಿಡ್ಜ್ ನಗರದಲ್ಲಿರುವ ‘ಟಂಬ್ಲರ್ ರಿಡ್ಜ್ ಹೈಸ್ಕೂಲ್’ಗೆ ಮಹಿಳೆಯೊಬ್ಬರು ನುಗ್ಗಿ ಗುಂಡಿನ ದಾಳಿ ನಡೆಸಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಇದೇ ವೇಳೆ, ಶಾಲೆ ಹತ್ತಿರದ ಮನೆಯೊಂದರಲ್ಲಿ ಎರಡು ಶವಗಳು ಪತ್ತೆಯಾಗಿವೆ.
ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಇನ್ವೆಂಟರ್ಸ್ ಅಸೋಸಿಯೇಷನ್ಸ್‌ನ (ಐಎಫ್‌ಐಎ) ಭಾರತ ವಿಭಾಗದ ಸಲಹಾ ಮಂಡಳಿಯ ಸದಸ್ಯರಾಗಿ ಉದ್ಯಮಿ ಸಂಜಯ್ ಕೊಪ್ಪಿಕರ್ ನೇಮಕವಾಗಿದ್ದಾರೆ.
ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಏರಿಕೆ ಆಗಿದೆ.
ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಢಾಕಾ: ಭದ್ರತೆಯ ಕಳವಳ ಇರುವುದರಿಂದ ಭಾರತದಲ್ಲಿ ಟಿ20ವಿಶ್ವಕಪ್ ಪಂದ್ಯಗಳನ್ನು ಆಡಲು ತಮ್ಮ ಸರ್ಕಾರ ನಿರಾಕರಿಸಿದ್ದಾಗಿ ಹೇಳಿದ್ದ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್ ಈಗ ಉಲ್ಟಾ ಹೊಡೆದಿದ್ದಾರೆ. ‘ದೇಶದ ಘನತೆಯನ್ನು ಸಂರಕ್ಷಿಸುವ ಉದ್ದೇಶದಿಂದ ಬಾಂಗ್ಲಾ ಕ್ರಿಕೆಟ್ ಮಂಡಳಿ ಮತ್ತು ಆಟಗಾರರೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಅಹಮದಾಬಾದ್: ಅಫ್ಗಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲೀಗ್ ಪಂದ್ಯವು ಎರಡು ಸೂಪರ್ ಓವರ್‌ಗಳಿಗೆ ಸಾಕ್ಷಿಯಾಯಿತು. ಎರಡನೇ ಸೂಪರ್ ಓವರ್‌ನ ಕೊನೆಯ ಎಸೆತದವರೆಗೂ ಸಾಗಿದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.