ADVERTISEMENT

TOP 10 NEWS | ಈ ದಿನದ ಪ್ರಮುಖ 10 ಸುದ್ದಿಗಳು: 9 ನವೆಂಬರ್‌ 2023

ಪ್ರಜಾವಾಣಿ ವಿಶೇಷ
Published 9 ನವೆಂಬರ್ 2023, 13:02 IST
Last Updated 9 ನವೆಂಬರ್ 2023, 13:02 IST
<div class="paragraphs"><p>ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ</p></div>

ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

   

ಸರ್ಕಾರದ ವಿರುದ್ಧ ಸತ್ಯಾಗ್ರಹ: ಯಡಿಯೂರಪ್ಪ,  ಖಾಸಗಿ ಬಸ್‌ ದರ ದುಪ್ಪಟ್ಟು, ಸರ್ಕಾರಿ ವೈದ್ಯರ ಸ್ಪರ್ಧೆಗೆ HC ಅಸ್ತು, 'The Archies' ಸಿನಿಮಾದ ಟ್ರೇಲರ್ ಬಿಡುಗಡೆ, ನ್ಯೂಜಿಲೆಂಡ್‌ಗೆ 172 ರನ್‌ಗಳ ಗೆಲುವಿನ ಗುರಿ ನೀಡಿದ ಶ್ರೀಲಂಕಾ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು.

ಸರ್ಕಾರದ ವಿರುದ್ಧ ಸತ್ಯಾಗ್ರಹ: ಯಡಿಯೂರಪ್ಪ

ಯಡಿಯೂರಪ್ಪ

‘ಬಿಜೆಪಿ ಸರ್ಕಾರ ಅನುಮೋದಿಸಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಸಲಾಗುವುದು’ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ADVERTISEMENT

ದೀಪಾವಳಿ: ಖಾಸಗಿ ಬಸ್‌ ದರ ದುಪ್ಪಟ್ಟು

ದೀಪಾವಳಿ ಹಬ್ಬದ ಜೊತೆಗೆ, ವಾರಾಂತ್ಯದ ರಜಾ ದಿನಗಳು ಒಟ್ಟೊಟ್ಟಿಗೆ ಬಂದಿರುವುದರಿಂದ ಈ ಅವಧಿಯಲ್ಲಿ ಊರಿಗೆ, ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಏರಿಸಿವೆ.

ಮಹದಾಯಿ ‘ವನ್ಯಜೀವಿ’ ತಕರಾರು ಇತ್ಯರ್ಥಕ್ಕೆ ಪ್ರಯತ್ನ

ಮಹದಾಯಿ (ಪ್ರಾತಿನಿಧಿಕ ಚಿತ್ರ)

ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ನಿರ್ಣಾಯಕ ಪ್ರಕ್ರಿಯೆಯಾಗಿರುವ ವನ್ಯಜೀವಿ ಅನುಮೋದನೆ ಪಡೆಯಲು ಕರ್ನಾಟಕ ಸರ್ಕಾರವು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವ ಸಲ್ಲಿಸಿದೆ. ಮಂಡಳಿಯ ಸ್ಥಾಯಿ ಸಮಿತಿಯ ಮುಂದಿನ ಸಭೆಯಲ್ಲಿ ಈ ಪ್ರಸ್ತಾವವು ಚರ್ಚೆಗೆ ಬರಲಿದೆ. 

ಚುನಾವಣೆಯಲ್ಲಿ ಸೋತರೆ ಕೆಲಸಕ್ಕೆ ಮರಳಿ: ಸರ್ಕಾರಿ ವೈದ್ಯರ ಸ್ಪರ್ಧೆಗೆ HC ಅಸ್ತು

ಸಾಂದರ್ಭಿಕ ಚಿತ್ರ

ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರಿ ವೈದ್ಯರ ಸ್ಪರ್ಧೆಗೆ ಅಸ್ತು ಎಂದಿರುವ ರಾಜಸ್ಥಾನ ಹೈಕೋರ್ಟ್, ಇದೇ 25ರಂದು ನಡೆಯಲಿರುವ ಚುನಾವಣೆಯಲ್ಲಿ ಪರಾಭವಗೊಂಡರೆ ಕೆಲಸಕ್ಕೆ ಮರಳಲು ಸೂಚಿಸಿದೆ.

ಜಾಗತಿಕ ಬಿಕ್ಕಟ್ಟಿಗೆ ಪರಿಹಾರ ನಿರ್ಧಾರ ಕೈಗೊಳ್ಳಲು ಭಾರತ ಮುಕ್ತ: ಶ್ವೇತಭವನ

ಶ್ವೇತಭವನ

‘ಭಾರತವು ಎಂದಿಗೂ ಅಮೆರಿಕದ ಕಾರ್ಯತಂತ್ರ ಪಾಲುದಾರಿಕೆ ರಾಷ್ಟ್ರವಾಗಿಯೇ ಇರಲಿದ್ದು, ಅದು ಜಗತ್ತಿನ ಯಾವುದೇ ಬಿಕ್ಕಟ್ಟಿನ ಕುರಿತು ತೀರ್ಮಾನ ಕೈಗೊಳ್ಳಲು ಅದು ಮುಕ್ತವಾಗಿದೆ’ ಎಂದು ಶ್ವೇತಭವನ ಹೇಳಿದೆ.

ಮಧ್ಯಪ್ರದೇಶ | ಕಾಂಗ್ರೆಸ್‌ಗೆ 100 ವರ್ಷ ಅಧಿಕಾರ ಕೊಡಬೇಡಿ: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸ್ಮರಣಿಕೆ ನೀಡಿದರು –ಪಿಟಿಐ ಚಿತ್ರ

ಕಾಂಗ್ರೆಸ್‌ ಪಕ್ಷವು ದೇಶದ ಪ್ರಗತಿಯನ್ನು ಹಿಮ್ಮುಖವಾಗಿ ಕೊಂಡೊಯ್ಯುವಲ್ಲಿ ಪರಿಣತಿ ಪಡೆದಿದೆ. ಹಾಗಾಗಿ  ಕನಿಷ್ಠ ನೂರು ವರ್ಷಗಳವರೆಗೆ ಆ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮತದಾರರಲ್ಲಿ ಮನವಿ ಮಾಡಿದರು.

ಶಾರುಖ್​ ಪುತ್ರಿ ಸುಹಾನಾ ಅಭಿನಯದ 'The Archies' ಸಿನಿಮಾದ ಟ್ರೇಲರ್ ಬಿಡುಗಡೆ

ಪುತ್ರಿ ಸುಹಾನಾ ಖಾನ್

 ಬಾಲಿವುಡ್‌ ಖ್ಯಾತ ನಟ ಶಾರುಖ್​ ಖಾನ್​ (Shah Rukh Khan) ಪುತ್ರಿ ಸುಹಾನಾ ಖಾನ್ (Suhana khan) ಅಭಿನಯದ ಮೊದಲ ಸಿನಿಮಾ ‘ದಿ ಆರ್ಚೀಸ್​’ (The Archies) ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

NZ vs SL: ನ್ಯೂಜಿಲೆಂಡ್‌ಗೆ 172 ರನ್‌ಗಳ ಗೆಲುವಿನ ಗುರಿ ನೀಡಿದ ಶ್ರೀಲಂಕಾ

NZ vs SL

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ನ್ಯೂಜಿಲೆಂಡ್‌ಗೆ 172 ರನ್‌ಗಳ ಗೆಲುವಿನ ಗುರಿ ನೀಡಿದೆ.

ಹರಿಯಾಣ | ನಕಲಿ ಮದ್ಯ ಸೇವನೆ ಶಂಕೆ: ಆರು ಮಂದಿ ಸಾವು

ಪ್ರಾತಿನಿಧಿಕ ಚಿತ್ರ

ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಶಂಕಿತ ನಕಲಿ ಮದ್ಯ ಸೇವನೆಯಿಂದ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿತೀಶ್ ಮಾತಿಗೆ ಅಮೆರಿಕ ನಟಿ ಕಿಡಿ; ಮಹಿಳೆಯನ್ನೇ CM ಮಾಡಬೇಕೆಂದ ಮೋದಿ ಅಭಿಮಾನಿ

ಅಮೆರಿಕ ಭೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಮೇರಿ ಮೆಲ್ಬಿನ್

ಮಹಿಳೆಯರ ಕುರಿತು ಮಾನಹಾನಿಕರ ಹೇಳಿಕೆ ನೀಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಅಮೆರಿಕದ ನಟಿ ಹಾಗೂ ಗಾಯಕಿ ಮೇರಿ ಮಿಲ್ಟೆನ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.