ADVERTISEMENT

22 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 5:56 IST
Last Updated 22 ಫೆಬ್ರುವರಿ 2026, 5:56 IST
<div class="paragraphs"><p>ಮುಖ 10 ಸುದ್ದಿಗಳು</p></div>

ಮುಖ 10 ಸುದ್ದಿಗಳು

   

ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ: ಮತ್ತೆ ಅವಕಾಶ ನೀಡಿ ಅರಣ್ಯ ಇಲಾಖೆ ಆದೇಶ ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ವಿ.ವಿಗಳಲ್ಲಿ ಸೆಗಣಿ, ಗಂಜಳಗಳ ಸಂಶೋಧನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ

ರಾಜ್ಯದ 32 ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹಸ್ತಲಾಘವ.

‘ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಬೆಳೆಸುವ ಬದಲು ಸೆಗಣಿ, ಗಂಜಳಗಳ ಕುರಿತು ಭೂತಕಾಲದ ಊಹಾತ್ಮಕ ಸಂಗತಿಗಳ ಕುರಿತು ಮೌಢ್ಯ ಬೆಳೆಸುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ADVERTISEMENT

ಎ.ಐ ಶೃಂಗಸಭೆ: ನಿರ್ಣಯಕ್ಕೆ 88 ರಾಷ್ಟ್ರಗಳ ಸಹಮತ

ಐಐಟಿ ಕಾನ್ಪುರ ಮತ್ತು ಇತರರ ಸಹಭಾಗಿತ್ವದಲ್ಲಿ ನಿರ್ಮಾಣವಾಗಿದ್ದ ರೋಬೊಟ್‌ ಶ್ವಾನವೊಂದು ಗಮನ ಸೆಳೆಯಿತು

ಕೃತಕ ಬುದ್ಧಿ ಮತ್ತೆಯ(ಎ.ಐ) ಪ್ರಯೋಜನಗಳನ್ನು ಸಮಾನವಾಗಿ ಹಂಚಿಕೆ ಮಾಡುವ ಬದ್ಧತೆಯನ್ನು ಹೊಂದುವ ನಿರ್ಣಯದೊಂದಿಗೆ ‘ಎ.ಐ ಇಂಪ್ಯಾಕ್ಟ್‌ ಶೃಂಗಸಭೆ–2026’ ಶನಿವಾರ ಮುಕ್ತಾಯಗೊಂಡಿತು.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ:ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ FIRಗೆ ಆದೇಶ

ಸ್ವಾಮಿ ಅವಿಮುಕ್ತೇಶ್ವರಾನಂದ

ಲಖನೌ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಅವರ ಶಿಷ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರಯಾಗರಾಜ್‌ನ ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಲಯವೊಂದು ಶನಿವಾರ ಆದೇಶಿಸಿದೆ.

ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ: ಮತ್ತೆ ಅವಕಾಶ ನೀಡಿ ಅರಣ್ಯ ಇಲಾಖೆ ಆದೇಶ

ಬಂಡೀಪುರ ಸಫಾರಿ ವಲಯದಲ್ಲಿ ಪ್ರವಾಸಿಗರಿಗೆ ಕಾಣಸಿಗುತ್ತಿರುವ ಮೂರು ಹುಲಿಗಳು (ಅರಣ್ಯ ಇಲಾಖೆ ಚಿತ್ರ)

ಬೆಂಗಳೂರು: ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸಫಾರಿಗೆ ಮತ್ತೆ ಅವಕಾಶ ನೀಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಮಾದಕವಸ್ತು ಕಳ್ಳಸಾಗಣೆ ಹಡಗಿನ ಮೇಲೆ ಅಮೆರಿಕ ದಾಳಿ: ಮೂವರು ಸಾವು

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್‌: ಪೂರ್ವ ಫೆಸಿಫಿಕ್‌ ಮಹಾಸಾಗರದಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿರುವ ಶಂಕೆ ಮೇಲೆ ಹಡಗಿನ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಎಂದು ಅಮೆರಿಕ ಸೇನೆ ತಿಳಿಸಿದೆ.

ಸಚಿವ ಶಿವಾನಂದ ಪಾಟೀಲಗೆ ಮಾತೃ ವಿಯೋಗ

ಗಂಗಾಬಾಯಿ

ವಿಜಯಪುರ: ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ತಾಯಿ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ (84) ಅವರು ವಯೋಸಹಜವಾಗಿ ಭಾನುವಾರ ನಸುಕಿನಲ್ಲಿ ನಿಧರಾಗಿದ್ದಾರೆ.

6 ರಾಜ್ಯಗಳಲ್ಲಿ ಎಸ್‌ಐಆರ್ ಪೂರ್ಣ:ಗುಜರಾತ್‌ನಲ್ಲಿ ಅತಿ ಹೆಚ್ಚು ಜನರ ಹೆಸರು ಡಿಲೀಟ್

ಚುನಾವಣಾ ಆಯೋಗ

ಚುನಾವಣಾ ಆಯೋಗವು 6 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮುಗಿಸಿದ್ದು, ಮತದಾರರ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಆಯೋಗದ ಪ್ರಕಟಣೆಯ ಪ್ರಕಾರ, ಪರಿಶೀಲನೆ ಸಮಯದಲ್ಲಿ ಬಹಳ ಪ್ರಮಾಣದ ಅನರ್ಹ ಮತದಾರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ.

ನಾಗಮಂಗಲ ಮಾಜಿ ಶಾಸಕ ಸುರೇಶಗೌಡ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

ನಾಗಮಂಗಲ (ಮಂಡ್ಯ ಜಿಲ್ಲೆ): ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ‌ ಸುರೇಶ್ ಗೌಡ ಅವರ ಕಾರು‌ ಪಲ್ಟಿಯಾಗಿ, ಕೈಗೆ ಬಲವಾದ ಪೆಟ್ಟು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Donald Trump Tariff |ಪ್ರತಿಸುಂಕ ಶೇ15ಕ್ಕೆ ಹೆಚ್ಚಳ: ಟ್ರಂಪ್

ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್‌/ವಾಷಿಂಗ್ಟನ್‌: ಎಲ್ಲ ದೇಶಗಳ ಮೇಲೆ ಶೇ 15ರಷ್ಟು ಪ್ರತಿಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶನಿವಾರ ಘೋಷಿಸಿದ್ದಾರೆ.

ಲೆಬನಾನ್‌: ಇಸ್ರೇಲ್‌ ದಾಳಿ, 12 ಮಂದಿ ಸಾವು

ದಾಳಿ

ಬೈರೂತ್‌: ಲೆಬನಾನ್‌ನ ಬೇಕಾ ಕಣಿವೆಯ ಮೇಲೆ ಇಸ್ರೇಲ್‌ ಶುಕ್ರವಾರ ನಡೆಸಿದ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ. 24 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.