ADVERTISEMENT

ಸಿಎಂ ಗೃಹ ಕಚೇರಿಯಿಂದ ಸ್ವಂತ ನಿವಾಸಕ್ಕೆ ಮರಳಲಿರುವ ಉದ್ಧವ್‌: ರಾವುತ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 16:25 IST
Last Updated 22 ಜೂನ್ 2022, 16:25 IST
ಉದ್ಧವ್‌ ಠಾಕ್ರೆ | ಪಿಟಿಐ ಚಿತ್ರ
ಉದ್ಧವ್‌ ಠಾಕ್ರೆ | ಪಿಟಿಐ ಚಿತ್ರ   

ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸಿಎಂ ಗೃಹ ಕಚೇರಿ 'ವರ್ಷಾ'ದಿಂದಸ್ವಂತ ನಿವಾಸ 'ಮಾತೋಶ್ರೀ' ಮರಳಲಿದ್ದಾರೆ ಎಂದು ಶಿವಸೇನಾ ವಕ್ತಾರ ಸಂಜಯ್‌ ರಾವುತ್‌ ತಿಳಿಸಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ಠಾಕ್ರೆ ಮುಂದುವರಿಯಲಿದ್ದಾರೆ ಎಂದೂ ಹೇಳಿದ್ದಾರೆ.

ಶಿವಸೇನಾ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರಕ್ಕಿರುವ ಬಹುಮತವನ್ನು ಸಿಎಂ ಉದ್ಧವ್‌ ಠಾಕ್ರೆ ಸಾಬೀತುಪಡಿಸಲಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸಂಜತ್‌ ರಾವುತ್‌ ಹೇಳಿದ್ದಾರೆ.

ಎಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಠಾಕ್ರೆ ಅವರ ಬಳಿ ಸರ್ಕಾರವನ್ನು ಉಳಿಸಲು ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಲೋಕನಾಥ್‌ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ ಎಂಬ ವದಂತಿಯನ್ನು ಸಂಜಯ್‌ ರಾವುತ್‌ ಅಲ್ಲಗಳೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.