ಮಣಿಪುರದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
–ಪಿಟಿಐ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರವು ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು 13 ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಹೊರತುಪಡಿಸಿ ಇಡೀ ರಾಜ್ಯದಾದ್ಯಂತ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಎಎಫ್‌ಎಸ್‌ಪಿಎ) ಮತ್ತೆ ಆರು ತಿಂಗಳು ವಿಸ್ತರಿಸಿದೆ.
ನಾಗಾಲ್ಯಾಂಡ್‌ನ ಎಂಟು ಜಿಲ್ಲೆಗಳು ಸೇರಿದಂತೆ ಅರುಣಾಚಲ ಪ್ರದೇಶದ ತಿರಪ್, ಚಾಂಗ್ಲಾಂಗ್, ಲಾಂಗ್ಡಿಂಗ್ ಜಿಲ್ಲೆಗಳು ಮತ್ತು ನಮ್ಸೈ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿಂದ ಎಎಫ್‌ಎಸ್‌ಪಿಎ ಅನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ
ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸೇನೆಗೆ ಶೋಧ ಕಾರ್ಯಾಚರಣೆ, ಬಂಧನ ಮತ್ತು ಕಂಡಲ್ಲಿ ಗುಂಡು ಹಾರಿಸಲು ವಿಶೇಷಾಧಿಕಾರ ಕಾಯ್ದೆಯಡಿ ಸಂಪೂರ್ಣ ಅಧಿಕಾರವಿದೆ.
ಸದ್ಯ ಮಣಿಪುರದ ಇಂಫಾಲ್, ಲ್ಯಾಂಫಾಲ್, ಸಿಂಗ್ಜಮೇಯಿ, ಪಟ್ಸೋಯ್, ವಾಂಗೋಯ್, ಪೊರೊಂಪತ್, ಹೀಂಗಾಂಗ್, ಇರಿಲ್ಬಂಗ್, ಥೌಬಲ್, ಬಿಷ್ಣುಪು, ನಂಬೋಲ್ ಮತ್ತು ಕಕ್ಚಿಂಗ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಎಫ್‌ಎಸ್‌ಪಿಎ ಜಾರಿಗೊಳಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.