ADVERTISEMENT

ರಾಮಮಂದಿರ: ಒತ್ತಡ ಹೇರಲು ಧರ್ಮ ಸಭೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 20:20 IST
Last Updated 10 ನವೆಂಬರ್ 2018, 20:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ರಾಮಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಕಾನೂನು ರೂಪಿಸಬೇಕು ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮುಂದಾಗಿದ್ದು, ತಿಂಗಳ ಕೊನೆಗೆ ಬೆಂಗಳೂರು, ಅಯೋಧ್ಯೆ ಹಾಗೂ ನಾಗಪುರದಲ್ಲಿ ಏಕಕಾಲಕ್ಕೆ ಧರ್ಮ ಸಭೆಗಳನ್ನು ನಡೆಸಲಿದೆ.

ರಾಮಮಂದಿರ ಚಳವಳಿಗೆ ಪುನಶ್ಚೇತನ ನೀಡಲುವಿಎಚ್‌ಪಿ ನಿರ್ಧರಿಸಿದೆ. ಇದಕ್ಕಾಗಿ ಧರ್ಮ ಸಭೆಗಳು, ವಿಶೇಷ ಆಚರಣೆಗಳು ಹಾಗೂ ರಾಜಕಾರಣಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿದೆ.

‘ಕಾಂಗ್ರೆಸ್ಸೇ ತೊಡಕು’
ಮಥುರಾ:
‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ‍ಪಕ್ಷವೇ ಅತ್ಯಂತ ದೊಡ್ಡ ತೊಡಕು. ಆ ಪಕ್ಷದ ಕಾರ್ಯಕರ್ತರು ರಾಮಮಂದಿರ ಮತ್ತು ರಾಮಸೇತುವನ್ನು ವಿರೋಧಿಸುತ್ತಾರೆ. ಗೋಹತ್ಯೆಯನ್ನು ಬೆಂಬಲಿಸುತ್ತಾರೆ’ ಎಂದು ಉತ್ತರ ಪ್ರದೇಶ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.