ತಿರುವರೂರು: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದರು. ತಮಿಳುನಾಡಿನಲ್ಲಿ ‘ಕುಟುಂಬ ಪ್ರಾಬಲ್ಯ’ವನ್ನು ತೊಡೆದುಹಾಕುವುದೇ ಟಿವಿಕೆ ಗುರಿ ಎಂದು ಹೇಳಿದರು.
ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ನೀವು ಮತ ಹಾಕುವುದಿಲ್ಲವೇ? ಇದು ಶೂನ್ಯ ಸಭೆಯೇ ಎಂದು ಭಾಗಿಯಾದ ಜನರನ್ನು ಪ್ರಶ್ನಿಸಿದರು. ಆಗ ‘ವಿಜಯ್... ವಿಜಯ್’ ಎಂಬ ಘೋಷಣೆ ಮೊಳಗಿತು.
‘ಡಿಎಂಕೆ ಸರ್ಕಾರವು ತಿರುವರೂರನ್ನು ನಿರ್ಲಕ್ಷಿಸಿದೆ. ಜಿಲ್ಲೆಯಲ್ಲಿ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ’ ಎಂದರು.
ಸುಮಾರು 50 ವರ್ಷಗಳಿಂದ ತಿರುವರೂರು ಡಿಎಂಕೆಯ ಭದ್ರಕೋಟೆಯಾಗಿದೆ. ಡಿಎಂಕೆಯ ದಿಗ್ಗಜ ನಾಯಕ ಎಂ.ಕರುಣಾನಿಧಿ ಅವರ ಜನ್ಮಸ್ಥಳವೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.