ADVERTISEMENT

ಅಂಬಾನಿ ನಿವಾಸದ ಬಳಿ ಸ್ಫೋಟಕ ಸಂಗ್ರಹಿಸಿಟ್ಟಿದ್ದು ಸಚಿನ್ ವಾಜೆ: ಎನ್‌ಐಎ

ಪಿಟಿಐ
Published 31 ಮಾರ್ಚ್ 2021, 10:42 IST
Last Updated 31 ಮಾರ್ಚ್ 2021, 10:42 IST
ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕ ತುಂಬಿದ ವಾಹನ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಂಡ (ಸಂಗ್ರಹ ಚಿತ್ರ)
ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕ ತುಂಬಿದ ವಾಹನ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಂಡ (ಸಂಗ್ರಹ ಚಿತ್ರ)   

ಮುಂಬೈ: ಕಳೆದ ತಿಂಗಳು ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಎಸ್‌ಯುವಿ ಕಾರಿನಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿಗಳನ್ನು ಆ ಪ್ರಕರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರೇ ಸಂಗ್ರಹಿಸಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.

ಆದರೆ,‌ ಈ ಸ್ಪೋಟಕಗಳ ಮೂಲದ ಬಗ್ಗೆ ವಿವರ ನೀಡಲು ತನಿಖಾಧಿಕಾರಿಗಳು ನಿರಾಕರಿಸಿದ್ದಾರೆ.

‘ಜಿಲೆಟಿನ್ ಕಡ್ಡಿಗಳನ್ನು ವಾಜೆಯೇ ಸಂಗ್ರಹಿಸಿದ್ದಾರೆ. ಎನ್‌ಐಎ ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಘಟನಾ ಸ್ಥಳದಲ್ಲಿ ವಾಜೆ ಇರುವುದನ್ನು ಸಾಕ್ಷ್ಯೀಕರಿಸುತ್ತಿವೆ‘ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಂಡ, ಮುಂಬೈ ಪೊಲೀಸ್ ಕಮಿಷನರ್‌ ಕಚೇರಿ ಸುತ್ತಮುತ್ತಲಿಲನ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸುತ್ತಿದೆ. ಈ ದೃಶ್ಯಗಳು ವಾಜೆ ಅವರ ಚಲನವಲನಗಳನ್ನು ಪತ್ತೆ ಮಾಡಲು ನೆರವಾಗುತ್ತವೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಪೊಲೀಸ್ ಕಮಿಷನರ್‌ ಕಚೇರಿ ಸುತ್ತಲಿನಲ್ಲಿರುವ ಕೆಲವು ಸಿಸಿಟಿವಿ ದೃಶ್ಯಗಳನ್ನು ಮತ್ತು ಡಿಜಿಟಲ್ ವಿಡಿಯೊ ರೆಕಾರ್ಡರ್‌ಗಳನ್ನು ನಾಶ ಮಾಡುವ ಪ್ರಯತ್ನಗಳು ನಡೆದಿವೆ. ಆದರೆ, ಮುಖ್ಯವಾದ ಹಲವು ದೃಶ್ಯಗಳನ್ನು ಸಂಗ್ರಹಿಸಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.