ADVERTISEMENT

ಭೂಪತಿನಗರ ಸ್ಫೋಟ ಪ್ರಕರಣ: ಮೂವರು ಟಿಎಂಸಿ ನಾಯಕರಿಗೆ NIA ಸಮನ್ಸ್ ​

ಪಿಟಿಐ
Published 8 ಏಪ್ರಿಲ್ 2024, 5:58 IST
Last Updated 8 ಏಪ್ರಿಲ್ 2024, 5:58 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಕೋಲ್ಕತ್ತಾ: ಭೂಪತಿನಗರ  ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್‌ನ ಮೂವರು (ಟಿಎಂಸಿ) ನಾಯಕರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಮನ್ಸ್ ಜಾರಿ ಮಾಡಿದೆ.

ಮನಬ್ ಕುಮಾರ್ ಕರಾಯ, ಸುಬೀರ್ ಮೈತಿ, ನಬ ಕುಮಾರ್ ಪೊಂಡಾ ಅವರನ್ನು ಇಂದು ವಿಚಾರಣೆಗಾಗಿ ಎನ್‌ಐಎ ಕಚೇರಿಗೆ ಹಾಜರಾಗುವಂತೆ ತಿಳಿಸಲಾಗಿದೆ. ಕಳೆದ ವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದಾಗ ಈ ಮೂವರು ತಪ್ಪಿಸಿಕೊಂಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಈ ಪ್ರಕರಣ ಸಂಬಂಧ ಬಂಧಿತ ಇಬ್ಬರು ಆರೋಪಿಗಳು ವಿಚಾರಣೆಗೆ ಸಹಕಾರಿಸುತ್ತಿಲ್ಲ ಎಂದರು.

ಪಶ್ಚಿಮ ಬಂಗಾಳದ ಭೂಪತಿನಗರದ ಮನೆಯೊಂದರಲ್ಲಿ 2022ರ ಡಿಸೆಂಬರ್‌ನಲ್ಲಿ ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಮೂವರು ಮೃತಪಟ್ಟಿದ್ದರು. ಈ ಪ್ರಕರಣ ಕುರಿತು ದೊರೆತಿದ್ದ ಮಹತ್ವದ ಮಾಹಿತಿ ಮೇರೆಗೆ ಮೇದಿನಿಪುರ ಜಿಲ್ಲೆಗೆ ಎನ್‌ಐಎ ತಂಡ ತೆರಳಿದ್ದಾಗ, ಅಲ್ಲಿನ ಕೆಲವರ ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿತು. ಇದರ ನಡುವೆಯೂ ಇಬ್ಬರು ಪ್ರಮುಖ ಸಂಚುಕೋರರನ್ನು ಬಂಧಿಸಲಾಗಿದೆ’ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.