ಗೋರಖಪುರ: ತಮ್ಮ ಗಂಡಂದಿರ ಮದ್ಯ ವ್ಯಸನದಿಂದ ಬೇಸತ್ತ ಇಬ್ಬರು ಮಹಿಳೆಯರು ಸಲಿಂಗ ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದಿದೆ.
ಕವಿತಾ ಹಾಗೂ ಗುಂಜಾ ಎಂಬ ಇಬ್ಬರು ಮಹಿಳೆಯರು ದೇವರಿಯಾದ ಶಿವ ದೇವಾಲಯದಲ್ಲಿ ಗುರುವಾರ ಸಂಜೆ ಮದುವೆಯಾದರು.
‘ನಾವಿಬ್ಬರೂ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಪರಿಚಿತರಾದೆವು. ನಮ್ಮಿಬ್ಬರ ಗಂಡಂದಿರೂ ಮದ್ಯವ್ಯಸನಿಗಳಾಗಿದ್ದರು ಹಾಗೂ ನಾವು ಕೌಟುಂಬಿಕ ಹಿಂಸೆಯಿಂದ ಬಳಲುತ್ತಿದ್ದೆವು. ಇಬ್ಬರ ಪರಿಸ್ಥಿತಿಯೂ ಒಂದೇ ರೀತಿಯಾಗಿದ್ದರಿಂದ ಇನ್ನಷ್ಟು ಹತ್ತಿರವಾದೆವು’ ಎಂದು ಕವಿತಾ ಹಾಗೂ ಗುಂಜಾ ಹೇಳಿದ್ದಾರೆ.
ಅಲ್ಲದೇ, ‘ನಮ್ಮ ಗಂಡಂದಿರ ದೌರ್ಜನ್ಯದಿಂದ ಹಿಂಸೆ ಅನುಭವಿಸುತ್ತಿದ್ದೆವು. ಹೀಗಾಗಿ ನೆಮ್ಮದಿಯ ಮತ್ತು ಪ್ರೀತಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ನಾವಿಬ್ಬರೂ ಗೋರಖಪುರದಲ್ಲಿ ವಾಸಿಸಲು ನಿರ್ಧರಿಸಿದ್ದೇವೆ. ಜೀವನಕ್ಕಾಗಿ ಇಬ್ಬರೂ ಕೆಲಸ ಮಾಡುತ್ತೇವೆ’ ಎಂದರು.
ಗುಂಜಾ ಅವರು ವರನಾಗಿ ಹಾಗೂ ಕವಿತಾ ಅವರು ವಧುವಾಗಿ ವಿವಾಹವಾದರು. ಇದೀಗ ಇಬ್ಬರು ಗೋರಖಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸಲು ನಿರ್ಧರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.