ADVERTISEMENT

ಏಳೂವರೆ ಗಂಟೆ ಶಸ್ತ್ರಚಿಕಿತ್ಸೆ: ಪಂಜಾಬ್‌ ಎಎಸ್‌ಐ ಕೈ ಮರುಜೋಡಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 15:53 IST
Last Updated 13 ಏಪ್ರಿಲ್ 2020, 15:53 IST
   

ಚಂಡೀಗಡ: ಏಳೂವರೆ ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರುವ ಪಂಜಾಬ್‌ನ ಚಂಡೀಗಡದ ಪಿಜಿಐ ಆಸ್ಪತ್ರೆಯ ಪೊಲೀಸರು ಪಿಎಸ್‌ಐ ಹರ್ಜೀತ್‌ ಸಿಂಗ್‌ ಅವರ ಕೈಯನ್ನು ಮರುಜೋಡಿಸಿದ್ದಾರೆ.

ಭಾನುವಾರ ಪಟಿಯಾಲ ಜಿಲ್ಲೆಯಲ್ಲಿ ನಿಹಾಂಗ್‌ ಸಿಕ್ಕರು ಕರ್ತವ್ಯ ನಿರತ ಎಎಸ್‌ಐ ಹರ್ಜೀತ್‌ ಸಿಂಗ್‌ ಅವರ ಮೇಲೆ ಕತ್ತಿಯಿಂದ ದಾಳಿ ನಡೆಸಿ ಕೈ ಕತ್ತರಿಸಿದ್ದರು.

ಎಎಸ್‌ಐ ಹರ್ಜೀತ್‌ ಸಿಂಗ್‌ ಅವರ ಕೈ ಕತ್ತರಿಸಿದ್ದ ನಿಹಾಂಗ್‌ ಸಿಖ್‌ ಬಲ್ವೀಂದರ್‌ ಸಿಂಗ್‌ನನ್ನು ಬಂಧಿಸಿ ಕರೆದೊಯ್ಯತ್ತಿರುವ ಪೊಲೀಸರು

ಶಸ್ತ್ರಚಿಕಿತ್ಸೆ ಕುರಿತು ಟ್ವೀಟ್‌ ಮಾಡಿರುವ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌, "ಪಿಜಿಐ ಆಸ್ಪತ್ರೆಯಲ್ಲಿ ಸತತ ಏಳೂವರೆ ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಲು ಸಂತೋಷವಾಗಿದೆ. ಎಎಸ್ಐ ಹರ್ಜೀತ್ ಸಿಂಗ್ ಅವರ ಮಣಿಕಟ್ಟನ್ನು ಯಶಸ್ವಿಯಾಗಿ ಮರುಜೋಡಣೆ ಮಾಡಲಾಗಿದೆ. ಶ್ರಮ ವಹಿಸಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರು ಮತ್ತು ಇಡೀ ತಂಡಕ್ಕೆ ನನ್ನ ಧನ್ಯವಾದಗಳು. ಎಎಸ್ಐ ಹರ್ಜೀತ್ ಸಿಂಗ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಹಾರೈಸುತ್ತೇನೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.