ADVERTISEMENT

ಗೆಳೆಯನ ಗೆಳತಿಗೆ ಗುಂಡಿಕ್ಕಿದ ಯುವತಿ: ದುರಂತದಲ್ಲಿ ಅಂತ್ಯವಾದ ತ್ರಿಕೋನ ಪ್ರೇಮಕಥೆ

ಏಜೆನ್ಸೀಸ್
Published 14 ಫೆಬ್ರುವರಿ 2026, 7:02 IST
Last Updated 14 ಫೆಬ್ರುವರಿ 2026, 7:02 IST
   

ಮುಂಬೈ; 19 ವರ್ಷದ ಯುವತಿಯೊಬ್ಬಳನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಲಾಡಿರುವ ಪ್ರಕರಣ ಮುಂಬೈನ ಶಿವಾಜಿ ನಗರದಲ್ಲಿ ವರದಿಯಾಗಿದೆ. ತ್ರಿಕೋನ ಪ್ರೇಮಕಥೆಯೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಮೃತ ಯುವತಿಯನ್ನು ಶಿಫಾ ಎಂದು ಗುರುತಿಸಲಾಗಿದೆ.

ಮೃತ ಯುವತಿ ಹಾಗೂ 23 ವರ್ಷದ ಯುವಕ ಹಾಗೂ ಆರೋಪಿ 25 ವರ್ಷದ ಮತ್ತೊಬ್ಬ ಯುವತಿ ನಡುವೆ ವೈಯಕ್ತಿಕ ವಿಚಾರಕ್ಕೆ ಜಗಳವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಾಥಮಿಕ ಮಾಹಿತಿ ಪ್ರಕಾರ, ಮೂವರ ನಡುವೆ ತ್ರಿಕೋನ ಪ್ರೇಮಕಥೆ ಇತ್ತು. ಆದರೆ ಶಿಫಾ ಹಾಗೂ ಯುವಕನ ನಡುವೆ ಇತ್ತೀಚೆಗೆ ವೈಮನಸ್ಸು ಏರ್ಪಟ್ಟಿತ್ತು. ಹೀಗಾಗಿ ಶಿಫಾಳನ್ನು, ಯುವತಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶಿಫಾಳನ್ನು ಕರೆಸಿ ಹಾಡಹಗಲೇ ಆರೋಪಿ ಯುವತಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.

ಶಿಫಾಳನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆಕೆ ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.

ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸಿದ ಪೊಲೀಸರು, ಘಟನೆ ನಡೆದು 12 ಗಂಟೆಗಳಲ್ಲಿ ಆರೋಪಿ ಯುವತಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣ ಸಂಬಂಧ ಯುವಕನನ್ನೂ ಬಂಧಿಸಲಾಗಿದೆ

ಭಾರತೀಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.