ADVERTISEMENT

Video: ಕೇಸರಿ ಬಟ್ಟೆ ಧರಿಸಿ ಮಾಂಸಾಹಾರ ಸೇವಿಸುತ್ತಿದ್ದ ಯುವಕರ ಮೇಲೆ ಗಂಭೀರ ಹಲ್ಲೆ

ಸಂಜಯ್ ಪಾಂಡೆ, ಲಖನೌ
Published 19 ಆಗಸ್ಟ್ 2025, 13:14 IST
Last Updated 19 ಆಗಸ್ಟ್ 2025, 13:14 IST
<div class="paragraphs"><p>ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ</p></div>

ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ

   

Credit: X/@LadaiJhagda

ಲಖನೌ: ಇತ್ತೀಚೆಗೆ ‘ಕಾವಡ್‌ ಯಾತ್ರೆ’ಯ ವೇಳೆ ಹೋಟೆಲ್‌ವೊಂದರಲ್ಲಿ ಮಾಂಸಾಹಾರ ಬಡಿಸಿದ್ದಕ್ಕಾಗಿ ಹಿಂಸಾಚಾರ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಕೇಸರಿ ಬಟ್ಟೆ ಧರಿಸಿ ಮಾಂಸಾಹಾರ ಸೇವಿಸಿದ್ದಕ್ಕಾಗಿ ಯುವಕರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ADVERTISEMENT

ಗೋಸಾಯಿಗಂಜ್ ಪ್ರದೇಶದ ನಿವಾಸಿಗಳಾದ ಯುವಕರು ಮಾಂಸಾಹಾರ ಸೇವಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಬಂದು ಕೇಸರಿ ಬಟ್ಟೆ ಧರಿಸಿ ಮಾಂಸಾಹಾರ ಸೇವಿಸುವುದನ್ನು ವಿರೋಧಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕೇಸರಿ ಬಟ್ಟೆ ಧರಿಸಿ ಮಾಂಸಾಹಾರ ಸೇವಿಸುವುದು ಧರ್ಮಕ್ಕೆ ವಿರುದ್ಧವಾದದ್ದು, ಮಾಂಸಾಹಾರ ಸೇವಿಸಬೇಡ ಎಂದು ಅವರು ಯುವಕನಿಗೆ ಹಲವು ಬಾರಿ ಹೇಳಿದ್ದರೂ ಕೇಳದೆ ಊಟ ಸೇವಿಸುವುದನ್ನು ಮುಂದುವರಿಸಿದ್ದ. ಇದೇ ವೇಳೆ ಪರಸ್ಪರ ವಾಗ್ವಾದ ನಡೆದು ಯುವಕರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಡಾಡುತ್ತಿದೆ.

ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.