ತಿರುವನಂತಪುರಂ: ಬಂಡೀಪುರದ ಅರಣ್ಯ ಒಳಗೆ ಅಕ್ರಮವಾಗಿ ಪ್ರವೇಶಿಸಿ, ಪ್ರಾಣಿಗಳಿಗಳನ್ನು ಪ್ರಚೋದಿಸಿ, ತೊಂದರೆ ನೀಡಿದ ಯುವಕನೊಬ್ಬನಿಗೆ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ₹25 ಸಾವಿರ ದಂಡ ವಿಧಿಸಿ, ಲಿಖಿತ ಕ್ಷಮಾಪಣೆ ಪತ್ರ ಬರೆಯಿಸಿಕೊಂಡಿದ್ದಾರೆ.
ಏ.13ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹರಿದಾಡಿತ್ತು.
ವಯನಾಡ್‌ನ ಸುಲ್ತಾನ್ ಬತ್ತೇರಿಯ ಅಬ್ದುಲ್ ಜಲೀಲ್, ಬಂಡೀಪುರದ ಒಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಣ್ಯದ ಒಳ ಪ್ರವೇಶಿಸಿ ಆನೆಗಳಿಗೆ ಪ್ರಚೋದನೆ ನೀಡಿದ್ದರು. ಈ ವೇಳೆ ಇತರೆ ಪ್ರಯಾಣಿಕರು, ಆಕ್ಷೇಪ ವ್ಯಕ್ತಪಡಿಸಿದರೂ ಕೂಡ ಅದೇ ವರ್ತನೆ ಮುಂದುವರಿಸಿದ್ದರು. ಜಲೀಲ್ ಕೃತ್ಯವನ್ನು ವಿಡಿಯೊ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಲಾಗಿತ್ತು.
ಈ ಕುರಿತು ಕೇರಳ ಮೂಲದ ವನ್ಯಜೀವಿ ಕಾರ್ಯಕರ್ತ ಸತೀಶ್ ಕುಮಾರ್ ಅವರು ಬಂಡೀಪುರ ಹುಲಿ ಸಂರಕ್ಷಣ ಅಧಿಕಾರಿಗಳಿಗೆ ದೂರು ನೀಡಿದ್ದರು. ವಿಡಿಯೊದಲ್ಲಿರುವ ವಾಹನದ ನೋಂದಣಿ ಸಂಖ್ಯೆ ಗುರುತಿಸಿ, ಅಧಿಕಾರಿಗಳು ಆರೋಪಿಯನ್ನು ಕರೆಸಿ ದಂಡ ವಿಧಿಸಿ, ಲಿಖಿತ ಕ್ಷಮಾಪಣೆ ಬರೆಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.