ADVERTISEMENT

ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ‌ ಪದಕಕ್ಕೆ ರಾಜ್ಯದ 6 ಪೊಲೀಸ್‌ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 9:34 IST
Last Updated 31 ಅಕ್ಟೋಬರ್ 2020, 9:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    
""

ನವದೆಹಲಿ: ಕೇಂದ್ರದ ಗೃಹ ಸಚಿವರ ವಿಶೇಷ ಕಾರ್ಯಾಚರಣೆ‌ ಪದಕಕ್ಕೆ ರಾಜ್ಯದ ಆರು ಜನ ಪೊಲೀಸ್‌ ಸಿಬ್ಬಂದಿ ಆಯ್ಕೆಯಾಗಿದ್ದಾರೆ.

2019-20ನೇ ಸಾಲಿನಲ್ಲಿ ಸಲ್ಲಿಸಿರುವ ಸೇವೆಗೆ ಈ ಪದಕ ನೀಡಲಾಗಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ

ರಾಜ್ಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಡಿವೈಎಸ್ ಪಿ‌ಗಳಾದ ಡಿ.ಕುಮಾರ್, ಎಸ್.ಕೆ. ಉಮೇಶ್, ಇನ್ಸ್ ಪೆಕ್ಟರ್ ಸುಶೀಲಾ, ಕಾನ್ ಸ್ಟೆಬಲ್ ಗಳಾದ ವೈ.ಶಂಕರ್ ಮತ್ತು ಎನ್ .ಪ್ರಕಾಶ್ ಅವರೇ ವಿಶೇಷ‌ ಪದಕಕ್ಕೆ‌ ಭಾಜನರಾದ ಸಿಬ್ಬಂದಿ.

ADVERTISEMENT

2019ರ ಡಿಸೆಂಬರ್ 21ರಿಂದ 2020ರ ಜನವರಿ 20ರವರೆಗೆ ನಡೆದಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಈ ಸಿಬ್ಬಂದಿ ಭಾಗವಹಿಸಿದ್ದರು ಎಂದು ಕೇಂದ್ರದ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಡಿ.ಕೆ. ಘೋಷ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ‌.

ರಾಜ್ಯದ‌ ಸಿಬ್ಬಂದಿ ಅಲ್ಲದೆ, ದೆಹಲಿ,ಗುಜರಾತ್, ತಮಿಳುನಾಡು ಮತ್ತು ಕೇರಳದ ಪೊಲೀಸ್ ಸಿಬ್ಬಂದಿಯನ್ನೂ ಪದಕಕ್ಕೆ ಆಯ್ಕೆ‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.