ADVERTISEMENT

'ಪೇಟೀಮ್‌' ಮೂಲಕ ಮೂರೂ ಪಕ್ಷಗಳನ್ನು ಅಣಕಿಸಿದ ಆಮ್‌ ಆದ್ಮಿ ಪಕ್ಷ 

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 16:33 IST
Last Updated 22 ಸೆಪ್ಟೆಂಬರ್ 2022, 16:33 IST
   

ಬೆಂಗಳೂರು: ಕಾಂಗ್ರೆಸ್‌ನ ‘ಪೇಸಿಎಂ’, ಬಿಜೆಪಿಯ ‘ಸ್ಕ್ಯಾಮ್‌ಸಿದ್ದರಾಮಯ್ಯ’ಗೆ ಪ್ರತಿಯಾಗಿ ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕವು ‘ಪೇಟೀಮ್‌’ ಪೋಸ್ಟರ್‌ ಬಿಡುಗಡೆ ಮಾಡಿದೆ.

ಮೂರು ಪಕ್ಷಗಳ ಚಿಹ್ನೆಗಳನ್ನು ಪಾವತಿ ಸ್ಕ್ಯಾನ್‌ಕೋಡ್‌ನಲ್ಲಿ ಹೊಂದಿಸಿದ ಪೋಸ್ಟರ್‌ ಅನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಎಎಪಿ ಪ್ರಕಟಿಸಿದೆ. ಮೂರೂ ಪಕ್ಷಗಳನ್ನು ‘ಪೇಟೀಮ್‌’ ಎಂದು ಗೇಲಿ ಮಾಡಿದೆ.

ADVERTISEMENT

‘ಎಲ್ಲರ ಕಮಿಷನ್ ಹೋಗಿ ಜನಸಾಮಾನ್ಯರಿಗೆ ಉಳಿಯೋದು ಪಂಗನಾಮವಷ್ಟೇ! ಇದು ಜೆಸಿಬಿ ಪಕ್ಷಗಳ ಸರ್ಕಾರಗಳ ಕಮಿಷನ್‌ ವ್ಯವಹಾರದ ಕುರಿತ ಚಿತ್ರ ನಿರೂಪಣೆ’ ಎಂದು ಪೋಸ್ಟರ್‌ಗೆ ಚಿತ್ರಶೀರ್ಷಿಕೆಯನ್ನು ನೀಡಲಾಗಿದೆ.

ಬಿಜೆಪಿ ಸರ್ಕಾರದ ವಿರುದ್ಧದ 40 ಪರ್ಸೆಂಟ್‌ ಕಮಿಷನ್‌ ಆರೋಪವನ್ನು ಬಳಸಿಕೊಂಡು ಕಾಂಗ್ರೆಸ್‌ ‘ಪೇಸಿಎಂ’ ಪೋಸ್ಟರ್‌ ಅಭಿಯಾನ ನಡೆಸಿತ್ತು. ಈ ಸಂಬಂಧ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ‘ಪೇಸಿಎಂ’ಗೆ ಪ್ರತಿಯಾಗಿ ಬಿಜೆಪಿಯು, ಸಿದ್ದರಾಮಯ್ಯ ಅವರ ವಿರುದ್ಧ ‘ಸ್ಕ್ಯಾಮ್‌ ಸಿದ್ದರಾಮಯ್ಯ’ ಎಂಬ ಘೋಷಣೆ ಬಳಸಿದೆ.

‘ಪೇಸಿಎಂ’ ಪೋಸ್ಟರ್‌ ವಿಧಾನ ಮಂಡಲ ಅಧಿವೇಶನದಲ್ಲೂ ಸದ್ದು ಮಾಡಿದ್ದು, ಕಾಂಗ್ರೆಸ್‌–ಬಿಜೆಪಿ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.