ADVERTISEMENT

‘ಕಬ್ಬು ಖರೀದಿಸದಿದ್ದರೆ ಕಾರ್ಖಾನೆ ಭಸ್ಮ’: ತುಂಗಭದ್ರ ರೈತ ಸಂಘ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 10:17 IST
Last Updated 21 ನವೆಂಬರ್ 2018, 10:17 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಬಳ್ಳಾರಿ: ‘ಸಿರುಗುಪ್ಪದ ಎನ್ಎಸ್ಎಲ್ ಕಬ್ಬಿನ ಕಾರ್ಖಾನೆಯವರು ನ.22ರಂದು ನಡೆಯಲಿರುವ ಸಭೆಯಲ್ಲಿ ರೈತರ ಪರ ನಿರ್ಣಯ ಕೈಗೊಳ್ಳದಿದ್ದರೆ, ಜಿಲ್ಲೆಯಾದ್ಯಂತ ಬಂದ್ ಮಾಡಿ ಕಾರ್ಖಾನೆಗೆ ಬೆಂಕಿ ಇಟ್ಟು ಭಸ್ಮ ಮಾಡುತ್ತೇವೆ’ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಎಚ್ಚರಿಕೆ ನೀಡಿದರು.

‘ಕಾರ್ಖಾನೆಯವರು 7,763 ಎಕರೆಗೆ ಬಿತ್ತನೆ ಬೀಜ ಕೊಟ್ಟು ಕಬ್ಬನ್ನು ತಾವೇ ಖರೀದಿಸುವುದಾಗಿ ಪತ್ರ ಬರೆದು ಕೊಟ್ಟಿದ್ದಾರೆ. ಆದರೆ, ನಷ್ಟದ ಭೀತಿಯಿಂದ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನ.19ರಂದು ಮೂರು ಸಭೆಗಳು ನಡೆದಿದ್ದು, ಮತ್ತೊಂದು ಸಭೆಯನ್ನು ನ.22ರಂದು ಕರೆದಿದ್ದಾರೆ. ಸಭೆಗೆ ಹಾಜರಾಗದಿದ್ದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.