ADVERTISEMENT

Covid-19 Karnataka Update | ಇಂದು 69 ಹೊಸ ಪ್ರಕರಣ; ಸೋಂಕಿತರ ಸಂಖ್ಯೆ 1056

​ಪ್ರಜಾವಾಣಿ ವಾರ್ತೆ
Published 15 ಮೇ 2020, 14:44 IST
Last Updated 15 ಮೇ 2020, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಾದ್ಯಂತ ಗುರುವಾರ ಸಂಜೆ 5 ರಿಂದ ಶುಕ್ರವಾರ ಸಂಜೆ 5ಗಂಟೆವರೆಗೆ 69 ಹೊಸ ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಆ ಮೂಲಕ ರಾಜ್ಯದಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ರಾಜ್ಯದಲ್ಲಿ ಒಟ್ಟು ಕೋವಿಡ್‌-19 ಖಚಿತ ಪ್ರಕರಣಗಳ ಸಂಖ್ಯೆ1,056ಕ್ಕೆ ಏರಿಕೆಯಾಗಿದೆ.

ಇದುವರೆಗೆ ಒಟ್ಟು 480 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಇನ್ನು 539 ಪ್ರಕರಣಗಳುಸಕ್ರಿಯವಾಗಿವೆ.

ADVERTISEMENT

ದಕ್ಷಿಣ ಕನ್ನಡದಲ್ಲಿ 15,ಬೆಂಗಳೂರಿನಲ್ಲಿ 13,ಮಂಡ್ಯದಲ್ಲಿ 13, ಹಾಸನ ಹಾಗೂ ಬೀದರ್‌ನಲ್ಲಿ 7, ಉಡುಪಿಯಲ್ಲಿ 5, ಕಲಬರ್ಗಿಯಲ್ಲಿ 3,ಚಿತ್ರದುರ್ಗದಲ್ಲಿ 2, ಶಿವಮೊಗ್ಗ, ಬಾಗಲಕೋಟೆ, ಕೋಲಾರ ಹಾಗೂ ಉತ್ತರಕನ್ನಡದಲ್ಲಿ ತಲಾ ಒಂದೊಂದುಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.