ಮಾಲೂರು: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಹಲವು ಕಡೆ ಗಣೇಶ ಮೂರ್ತಿಗಳನ್ನು ಕೆಡವಿ, ಫ್ಲೆಕ್ಸ್ ಬೋರ್ಡ್‌ಗಳನ್ನು ಹರಿದು ಹಾಕಿದ್ದಾರೆ.
ಕುಂಬಾರಪೇಟೆ ವ್ಯಾಪ್ತಿಯಲ್ಲಿ ನಾಲ್ಕು ಗಣಪತಿ ಮೂರ್ತಿಗಳು, ಬಾಬುರಾವ್ ಬೀದಿ, ಕುಪ್ಪಶೆಟ್ಟಿ ಬಾವಿ ಬಳಿ, ಧರ್ಮರಾಯಸ್ವಾಮಿ ದೇವಸ್ಥಾನ, ಗಾಂಧಿ ಸರ್ಕಲ್ ಬಳಿ ಗಣಪತಿ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ.
ಪಟ್ಟಣದ ಮಲ್ಲೇಶ್ (25), ಕಾಂತರಾಜು (30), ಗಿರೀಶ್ (24), ಪುನೀತ್ (25), ಚಂದು (21) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.