ಪಟಾಕಿ
ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ದೀಪಾವಳಿಯ ಮೂರು ದಿನಗಳಲ್ಲಿ ವಾಯು ಮಾಲಿನ್ಯ ಸರಾಸರಿ ಶೇ 29ರಷ್ಟು ಕಡಿಮೆಯಾಗಿದ್ದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ 12ರಷ್ಟು ಇಳಿಕೆಯಾಗಿದೆ.
ದೀಪಾವಳಿಯ ಮೊದಲ ದಿನ ಶೇ 35ರಷ್ಟು, ಎರಡನೇ ದಿನ ಶೇ 27ರಷ್ಟು, ಮೂರನೇ ದಿನ ಶೇ 27ರಷ್ಟು ವಾಯು ಮಾಲಿನ್ಯ ಕಡಿಮೆಯಾಗಿದೆ. ಹಿಂದಿನ ದೀಪಾವಳಿ ಹಾಗೂ ಸಾಮಾನ್ಯ ದಿನಗಳಲ್ಲಿ ದಾಖಲಾಗುವ ವಾಯು ಮಾಲಿನ್ಯಕ್ಕಿಂತ ಕಡಿಮೆ ಪ್ರಮಾಣ (ವಾಯು ಗುಣಮಟ್ಟ ಇಂಡೆಕ್ಸ್– ಎಕ್ಯೂಐ) ಈ ವರ್ಷದ ದೀಪಾವಳಿ ವೇಳೆ ದಾಖಲಾಗಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಪನ ಕೇಂದ್ರಗಳಲ್ಲಿ ದೀಪಾವಳಿಯ ಹಿಂದಿನ ಸೋಮವಾರ ಅ.13ರಂದು ಸರಾಸರಿ 63 ಎಕ್ಯೂಐ ದಾಖಲಾಗಿತ್ತು. ದೀಪಾವಳಿಯ ಮೊದಲ ದಿನ 53 ಎಕ್ಯೂಐ, ಎರಡನೇ ದಿನ 55 ಎಕ್ಯೂಐ, ಮೂರನೇ ದಿನ 60 ಎಕ್ಯೂಐ ದಾಖಲಾಗಿ, ಸಾಮಾನ್ಯ ದಿನಕ್ಕಿಂತಲೂ ಕಡಿಮೆ ವಾಯು ಮಾಲಿನ್ಯ ದಾಖಲಾಗಿದೆ. ಕಳೆದ ವರ್ಷದ ದೀಪಾವಳಿಯ ಮೂರು ದಿನ ಎಕ್ಯೂಐ ಸರಾಸರಿ 73 ಆಗಿತ್ತು. ಈ ಬಾರಿ 56 ಎಕ್ಯೂಐ ದಾಖಲಾಗಿದೆ.
ಬೀದರ್‌ನಲ್ಲಿ ಅತಿಹೆಚ್ಚು ವಾಯು ಮಾಲಿನ್ಯ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಶೇ 38ರಷ್ಟು ವೃದ್ಧಿಯಾಗಿದೆ. ಬೆಳಗಾವಿ, ಬಾಗಲಕೋಟೆ, ಕೊಡಗು, ಕಲಬುರಗಿ–1ರಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದೆ.
ದಾವಣಗೆರೆಯಲ್ಲಿ ಈ ಬಾರಿ ದೀಪಾವಳಿಯ ವಾಯು ಮಾಲಿನ್ಯ ದಾಖಲೆ ಪ್ರಮಾಣದಲ್ಲಿ (ಶೇ 123) ಕಡಿಮೆಯಾಗಿದೆ. ಮೈಸೂರು, ಉತ್ತರ ಕನ್ನಡದಲ್ಲೂ ವಾಯು ಮಾಲಿನ್ಯ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಶೇ 44 ರಷ್ಟು ಕಡಿಮೆಯಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ರಾಯಚೂರು, ಕೊಪ್ಪಳ, ಉಡುಪಿ, ತುಮಕೂರಿನಲ್ಲಿ ವಾಯು ಮಾಲಿನ್ಯ ದತ್ತಾಂಶ ನಿರ್ವಹಣೆ ಮಾಡಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಬೆಳಗಾವಿಯಲ್ಲಿ 76.18 ಡೆಸಿಬಲ್ (+28%), ಹಾಸನದಲ್ಲಿ 75.26 ಡೆಸಿಬಲ್ (+23%), ಚಿಕ್ಕಬಳ್ಳಾಪುರದಲ್ಲಿ 53.78 ಡೆಸಿಬಲ್ (+23%), ಚಿಕ್ಕಮಗಳೂರಿನಲ್ಲಿ 77.86 ಡೆಸಿಬಲ್ (+22%), ಚಿತ್ರದುರ್ಗ ದಲ್ಲಿ 67.26 ಡೆಸಿಬಲ್ (+21%), ಮಂಡ್ಯದಲ್ಲಿ 67.19 ಡೆಸಿಬಲ್ (+19%) ದಾಖಲಾಗಿದ್ದು, ಈ ನಗರ/ ಜಿಲ್ಲಾ ಕೇಂದ್ರಗಳು ಶಬ್ದ ಮಾಲಿನ್ಯದಲ್ಲಿ ಮೊದಲ ಐದು ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.